×
Ad

ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಸಿಪಿಐ ಸಿದ್ಧ

Update: 2017-04-02 14:43 IST

ಹೊಸದಿಲ್ಲಿ, ಎ. 2: ಹೊಸರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿಪಿಐ ಪ್ರಯತ್ನ ಆರಂಭಿಸಿದೆ. ಫ್ಯಾಶಿಸ್ಟ್ ಸಿದ್ಧಾಂತ ಇರುವ ಕೇಂದ್ರ ಸರಕಾರವನ್ನು ವಿರೋಧಿಸಲು ಜಾತ್ಯತೀತ ಶಕ್ತಿಗಳು ಒಗ್ಗೂಡುವುದು ಅಗತ್ಯವೆಂದು ಸಿಪಿಐ ಅಭಿಪ್ರಾಯ ಪ್ರಕಟಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಈವರೆಗೂ ಸಿಪಿಐ ಸಮಾನ ದೂರ ಕಾಪಾಡಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಕ್ರಮಗಳಿಗೆ ಮನಸ್ಸುಮಾಡಿದೆ. ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅದು ಹೇಳಿದೆ. ಆದ್ದರಿಂದ ದೇಶದ ಮಟ್ಟದಲ್ಲಿ ಜಾತ್ಯತೀತ ಕೂಟವನ್ನು ರಚಿಸಬೇಕಿದೆ. ಈನಿಟ್ಟಿನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಸಿದ್ಧ ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾಲದ ಅಗತ್ಯವಾದ ರಾಜಕೀಯ ಅನ್ವೇಷಣೆಗೆ ಸಮಯವಾಗಿದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಬಿನೋಯ್ ವಿಶ್ವಂ ಹೇಳಿದ್ದಾರೆ. ಬಿಜೆಪಿಯನ್ನು ತಡೆಯಲು ವಿಶಾಲವಾದ ಮೈತ್ರಿಕೂಟದ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News