ಗ್ರೀನ್‌ಲ್ಯಾಂಡ್ ನೀರ್ಗಲ್ಲುಗಳು ಶೀಘ್ರವೇ ಮಾಯ: ಅಧ್ಯಯನ

Update: 2017-04-02 15:09 GMT

ವಾಶಿಂಗ್ಟನ್, ಎ. 2: ಗ್ರೀನ್‌ಲ್ಯಾಂಡ್ ಕರಾವಳಿಯ ಅಂಚಿನಲ್ಲಿ ಇರುವ ನೀರ್ಗಲ್ಲುಗಳು ಮತ್ತು ಮಂಜುಗಡ್ಡೆಗಳು ಈಗ ಕರಗುತ್ತಿರುವ ವೇಗವನ್ನು ನೋಡಿದರೆ ಅವುಗಳು ಮತ್ತೆ ರೂಪುಗೊಳ್ಳುವ ಸಾಧ್ಯತೆ ಕಡಿಮೆ ಹಾಗೂ ಆ ಪೈಕಿ ಕೆಲವು 2100ರ ವೇಳೆಗೆ ಶಾಶ್ವತವಾಗಿ ಇಲ್ಲವಾಗುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.

ದ್ವೀಪದ ಮಂಜುಗಡ್ಡೆ ಕರಗುವ ಪ್ರಮಾಣವು 20 ವರ್ಷಗಳ ಹಿಂದೆಯೇ ಸಹ್ಯ ಮಿತಿಯನ್ನು ದಾಟಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಕರಾವಳಿಯಲ್ಲಿರುವ ಅತಿ ಸಣ್ಣ ನೀರ್ಗಲ್ಲುಗಳು ಮತ್ತು ಮಂಜುಗಡ್ಡೆಗಳು ಕಳೆದುಕೊಂಡ ಮಂಜು ಮತ್ತೆ ಬೆಳೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರೀನ್‌ಲ್ಯಾಂಡ್‌ನ ಕರಾವಳಿ ಮಂಜಿನ ಕರಗುವಿಕೆಯಿಂದಾಗಿ 2100ರ ವೇಳೆಗೆ ಜಾಗತಿಕ ಸಮುದ್ರದ ಮಟ್ಟ 1.5 ಇಂಚಿನಷ್ಟು ಹೆಚ್ಚಾಗಲಿದೆ ಎಂದು ನೂತನ ಅಧ್ಯಯನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News