ವಿಮಾನ ಹಾರಿಸಬಲ್ಲ ಹುಲ್ಲಿನ ಇಂಧನ ಅಭಿವೃದ್ಧಿ

Update: 2017-04-02 16:53 GMT

ಲಂಡನ್, ಎ. 2: ಹೆಚ್ಚು ಸಹ್ಯ ಇಂಧನ ಮೂಲಗಳ ತಲಾಶೆಯಲ್ಲಿರುವ ವಿಜ್ಞಾನಿಗಳು ‘ಗ್ರಾಸೊಲಿನ್’ ಎಂಬ ಜೈವಿಕ ಇಂಧನ ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಹುಲ್ಲಿನಿಂದ ಅಭಿವೃದ್ಧಿಪಡಿಸಲಾದ ಈ ಇಂಧನವವನ್ನು ಒಂದು ದಿನ ವಿಮಾನಕ್ಕೆ ಬಳಸಬಹುದಾಗಿದೆ.

ಇಂಧನವಾಗಿ ಬಳಸಲು ಸಾಧ್ಯವಾಗುವವರೆಗೆ ಹುಲ್ಲನ್ನು ಸಂಸ್ಕರಿಸಬಲ್ಲ ವಿಧಾನಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

‘‘ಈವರೆಗೆ ಹುಲ್ಲನ್ನು ಮುಖ್ಯವಾಗಿ ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತಿತ್ತು. ಈಗ ಅದರ ಜೊತೆಗೆ ಹುಲ್ಲನ್ನು ಜೈವಿಕ ಇಂಧನವಾಗಿಯೂ ಬಳಸಬಹುದಾಗಿದೆ. ಹುಲ್ಲು ಯಥೇಚ್ಛವಾಗಿ ಸಿಗುವುದರಿಂದ, ಅದನ್ನು ಪರಿಪೂರ್ಣ ಇಂಧನ ಮೂಲವಾಗಿ ಬಳಸಬಹುದಾಗಿದೆ’’ ಎಂದು ಬೆಲ್ಜಿಯಂನ ೆಂಟ್ ವಿಶ್ವವಿದ್ಯಾನಿಲಯದ ವೇ ಸರ್ನ್ ಖೋರ್ ಹೇಳುತ್ತಾರೆ.

ಹುಲ್ಲಿನ ಜೈವಿಕ ಕರಗುವಿಕೆಯನ್ನು ಹೆಚ್ಚಿಸಲು ಮೊದಲು ಅದನ್ನು ಸಂಸ್ಕರಿಸಲಾಗುತ್ತದೆ. ಬಳಿಕ ಅದಕ್ಕೆ ಬ್ಯಾಕ್ಟೀರಿಯಗಳನ್ನು ಸೇರಿಸಲಾಗುತ್ತದೆ. ಬ್ಯಾಕ್ಟೀರಿಯಗಳು ಹುಲ್ಲಿನಲ್ಲಿರುವ ಸಕ್ಕರೆಯನ್ನು ಲ್ಯಾಕ್ಟಿಕ್ ಆಮ್ಲ ಮತ್ತು ಅದರ ಉತ್ಪನ್ನಗಳಾಗಿ ಮಾರ್ಪಡಿಸುತ್ತವೆ.

ಲ್ಯಾಕ್ಟಿಕ್ ಆಮ್ಲವನ್ನು ಕ್ಯಾಪ್ರೋಯಿಕ್ ಆಮ್ಲವಾಗಿ ಪರಿವರ್ತಿಸಲಾಗುತ್ತದೆ ಹಾಗೂ ಕ್ಯಾಪ್ರೋಯಿಕ್ ಆಮ್ಲವನ್ನು ಡಿಕೇನ್ ಆಗಿ ಪರಿವರ್ತಿಸಲಾಗುತ್ತದೆ. ಈ ಡಿಕೇನನ್ನು ವಿಮಾನ ಇಂಧನವಾಗಿ ಬಳಸಬಹುದು ಎಂದು ಸಂಶೋಧಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News