×
Ad

ಶ್ರೀನಗರ:ಗ್ರೆನೇಡ್ ದಾಳಿಯಲ್ಲಿ ಪೊಲೀಸ್ ಬಲಿ,15 ಜನರಿಗೆ ಗಾಯ

Update: 2017-04-02 22:40 IST

ಶ್ರೀನಗರ,ಎ.2: ಹಳೆಯ ಶ್ರೀನಗರದ ನೋವಟ್ಟಾ ಪ್ರದೇಶದಲ್ಲಿ ರವಿವಾರ ಸಂಜೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಕೊಲ್ಲಲ್ಪಟ್ಟಿದ್ದು, ಇತರ 15 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಉಗ್ರರು ಸಂಜೆ ಏಳು ಗಂಟೆಯ ಸುಮಾರಿಗೆ ನೋವಟ್ಟಾದ ಗಂಜ್‌ಬಕ್ಷ ಪಾರ್ಕ್ ಸಮೀಪ ಪೊಲೀಸ್ ತಂಡದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ.. ಪೊಲೀಸರು ದಿನವಿಡೀ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸಿದ ಬಳಿಕ ವಾಪಸಾ ಗುತ್ತಿದ್ದರು.

ಗ್ರೆನೇಡ್ ಸ್ಫೋಟದಿಂದ 16 ಪೊಲೀಸರು ಗಾಯಗೊಂಡಿದ್ದು, ಈ ಪೈಕಿ ಶಮೀಮ್ ಅಹ್ಮದ್ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಗಾಯಾಳುಗಳಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗಳೂ ಸೇರಿದ್ದಾರೆ.

ಈ ಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದು, ಅವರನ್ನು ನಿಯಂತ್ರಿಸಲು ಈ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಉಗ್ರರ ಸೆರೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News