ಗಾಝಾ ಪ್ರವೇಶಿಸಲು ಇಸ್ರೇಲ್ ತಡೆ : ಹ್ಯೂಮನ್ ರೈಟ್ಸ್ ವಾಚ್ ಆರೋಪ

Update: 2017-04-03 16:26 GMT

ಜೆರುಸಲೇಂ, ಎ. 3: ಮಾನವಹಕ್ಕುಗಳ ಕಾರ್ಯಕರ್ತರು ಗಾಝಾ ಪಟ್ಟಿಗೆ ಹೋಗಿ ಬರುವುದನ್ನು ಇಸ್ರೇಲ್ ತಡೆಯುತ್ತಿದೆ ಹಾಗೂ ಇದು ಹಮಾಸ್ ನಿಯಂತ್ರಣದ ಫೆಲೆಸ್ತೀನ್ ಭಾಗದಲ್ಲಿನ ಅವರ ಕಾರ್ಯಕ್ಕೆ ಅಡಚಣೆಯೊಡ್ಡಿದೆ ಎಂದು ಮಾನವಹಕ್ಕುಗಳ ಸಂಘಟನೆ 'ಹ್ಯೂಮನ್ ರೈಟ್ಸ್ ವಾಚ್' ಸೋಮವಾರ ಆರೋಪಿಸಿದೆ.

2008ರ ಬಳಿಕ ಒಮ್ಮೆ ಮಾತ್ರ ವಿದೇಶಿ ಸಿಬ್ಬಂದಿ ಗಾಝಾ ಪ್ರವೇಶಿಸಲು ಇಸ್ರೇಲ್ ಅನುಮತಿ ನೀಡಿತ್ತು ಎಂದು ಅದು ಹೇಳಿದೆ.

''2012ರ ಬಳಿಕ ತಮ್ಮ ಸಿಬ್ಬಂದಿಯನ್ನು ಈಜಿಪ್ಟ್ ಮೂಲಕ ಗಾಝಾಕ್ಕೆ ಕಳುಹಿಸಲು ಹ್ಯೂಮನ್ ರೈಟ್ಸ್ ವಾಚ್‌ಗಾಗಲಿ, ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ಗಾಗಲಿ ಸಾಧ್ಯವಾಗಿಲ್ಲ'' ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News