ಮಂಗಳೂರು: ಕನಕ ಸ್ಮತಿ ಗಾಯನ ಕಾರ್ಯಕ್ರಮಕ್ಕೆ ಆಯ್ಕೆ

Update: 2017-04-03 18:34 GMT

ಮಂಗಳೂರು, ಎ.3: ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರವು ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಿದ ‘ಕನಕ ಕೀರ್ತನ’ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ 52 ಅಭ್ಯರ್ಥಿಗಳ ಪೈಕಿ ಪ್ರತಿ ವಿಭಾಗದಿಂದ ತಲಾ ಮೂವರು ಆಯ್ಕೆಯಾಗಿದ್ದಾರೆ. ಎ.6ಂದು ಮಂಗಳಗಂಗೋತ್ರಿಯಲ್ಲಿ ನಡೆಯುವ ‘ಕನಕ ಸ್ಮತಿ’ ಗಾಯನ ಕಾರ್ಯಕ್ರಮಕ್ಕೆ ಅವರು ಸ್ಪರ್ಧಿಸಲಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯದ ಗೌತಮ್ ಭಟ್, ಗೌರೀಶ ಭಟ್, ಮತ್ತು ನಗರದ ರಾಮಕೃಷ್ಣ ಶಾಲೆಯ ಆರ್. ಸುಧೀಕ್ಷಾ ಆಯ್ಕೆಯಾಗಿದ್ದಾರೆ.

ಪದವಿಪೂರ್ವ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಸ್ತುತಿ ಎಸ್. ಪ್ರಭು, ಸಂತ ಅಲೋಶಿಯಸ್ ಕಾಲೇಜಿನ ವಿಜೇತ್ ಉಳ್ಳಾಲ್, ಶಾರದಾ ಕಾಲೇಜಿನ ಸಂಹಿತಾ ಡಿ. ಆಯ್ಕೆಯಾಗಿದ್ದಾರೆ.

ಪದವಿ ಕಾಲೇಜು ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಅಖಿಲಾ ಕೆ., ಆಳ್ವಾಸ್ ಕಾಲೇಜಿನ ಪವಿತ್ರಾ ಆಚಾರ್ಯ ಮತ್ತು ವರ್ಷಾ ಆಚಾರ್ಯ, ಕಾರ್ಕಳ ಭುವನೇಂದ್ರ ಕಾಲೇಜಿನ ಶ್ರುತಿ ಬಿ.ಎಸ್. ಆಯ್ಕೆಯಾಗಿದ್ದಾರೆ.

 ಅಧ್ಯಾಪಕರು ಮತ್ತು ಅಧ್ಯಾಪಕರೇತರ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ನಂದಿನಿ ಎಸ್., ಆಳ್ವಾಸ್ ಕಾಲೇಜಿನ ಉಪ ನ್ಯಾಸಕಿ ಸ್ವಪ್ನಾಶ್ರೀ ಅಡಿಗ, ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ಧಕಟ್ಟೆ ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ವಿಭಾಗದಲ್ಲಿ ಉರ್ವಸ್ಟೋರ್‌ನ ಆಕೃತಿ ಐ.ಎಸ್. ಭಟ್, ಮೆಲ್ಕಾರ್‌ನ ಶ್ರೀದೇವಿ ಮೆಲ್ಕಾರ್, ಕುಳಾಯಿಯ ಆಶ್ವತ್ಥ ನಾರಾಯಣ್ ಬಿ.ಟಿ. ಆಯ್ಕೆಯಾಗಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ಆಕಾಶ ವಾಣಿಯ ಸಹಾಯಕ ನಿಲಯ ನಿರ್ದೇಶಕಿ ಉಷಾಲತಾ, ಶಕುಂತಳಾ ಕಿಣಿ, ಆಕಾಶವಾಣಿ ನಿಲಯದ ಕಲಾವಿದರಾದ ವಿದ್ವಾನ್ ಕೆ.ಆರ್. ಕುಮಾರ್, ಪಂಡಿತ್ ಮೌನೇಶ್ ಕುಮಾರ್ ಛಾವಣಿ ನಡೆಸಿಕೊಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News