ಸ್ಪೇಸ್ ಎಡ್ಜ್‌ಗೆ ಪ್ರಯಾಣ ಉಪನ್ಯಾಸ ಕಾರ್ಯಕ್ರಮ

Update: 2017-04-03 18:35 GMT

ಮಂಗಳೂರು, ಎ.3: ಕೆಂಜಾರಿನಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಏರೋನಾಟಿಕಲ್ ವಿಭಾಗದ ವತಿಯಿಂದ ಸ್ಪೇಸ್ ಎಡ್ಜ್‌ಗೆ ಪ್ರಯಾಣ ಎಂಬ ವಿಷಯದಲ್ಲಿ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಸ್ರೋದ ಹಿರಿಯ ವಿಜ್ಞಾನಿ ಟಿ.ಎನ್. ಸುರೇಶ್ ಕುಮಾರ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಜೀವನದಲ್ಲಿ ಯಾರು ವಿನಮ್ರರಾಗಿ ಮತ್ತು ಸರಳವಾಗಿ ಇರುತ್ತಾರೋ ಅವರಿಗೆ ಯಶಸ್ಸು ಖಂಡಿತ ವಾಗಿಯೂ ಲಭಿಸುತ್ತದೆ. ಪಕ್ಷಿಗಳು ಹಾರುವುದನ್ನು ನೋಡಿ ಮನುಷ್ಯನಿಗೆ ಹಾರುವ ಯಂತ್ರ ಹುಡುಕುವ ಸ್ಫೂರ್ತಿ ಬಂದಿದೆ.

ಅದಕ್ಕಾಗಿ ನಾವು ಯಾವಾಗಲೂ ಬೇರೊಬ್ಬರಿಗೆ ಸ್ಫೂರ್ತಿಯಾಗಿ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಕನಸು ಕಾಣಬೇಕು ಹಾಗೂ ಕನಸು ನನಸಾಗಲು ಪ್ರಯತ್ನಿಸಬೇಕು ಎಂದರು. ಟಿ.ಎನ್.ಸುರೇಶ್‌ಕುಮಾರ್ ಭೂಮಿಯ ಎರಡನೆ ಪದರವನ್ನು (ಸ್ಟ್ರಾಟೋಸ್ಪಿಯರ್) ಭೇಟಿ ಮಾಡಿದ ಭಾರತೀ ಯರಲ್ಲಿ ಮೊದಲಿಗರು. ಅವರು ಶೂನ್ಯ ಗುರುತ್ವಾ ಕರ್ಷಣೆಯ ಅನುಭವವನ್ನು ಕೂಡ ಹೊಂದಿರುವರು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ. ಹಾಗೂ ಏರೋನಾಟಿಕಲ್ ವಿಭಾಗದ ಮುಖ್ಯಸ್ಥ ಸುಧೀರ್‌ಕುಮಾರ್ ಬಿ.ಎನ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News