ಮಂಗಳೂರು: ಮೇ ದಿನ ಆಚರಣಾ ಸಮಿತಿ ರಚನೆ

Update: 2017-04-03 18:37 GMT

ಮಂಗಳೂರು, ಎ.3: ಎಂಟು ಗಂಟೆ ದುಡಿಮೆ, ಎಂಟು ಗಂಟೆ ನಿದ್ರೆ, ಎಂಟು ಗಂಟೆ ವಿಶ್ರಾಂತಿ ಆಗ್ರಹಿಸಿ ಚಿಕಾಗೋ ನಗರದ ಕಾರ್ಮಿಕರು ನೂರು ವರ್ಷಗಳ ಹಿಂದೆ ನಡೆಸಿದ ಹೋರಾಟಗಳಲ್ಲಿ ಹರಿದ ಕಾರ್ಮಿಕರ ನೆತ್ತರ ಬಣ್ಣದ ಕೆಂಪು ಬಾವುಟ ವನ್ನು ಎತ್ತಿ ಹಿಡಿದು ನಡೆಯುವ ಧೀರ ಆಚರಣೆ ಮೇ ದಿನವಾಗಿದೆ ಎಂದು ನಿವೃತ್ತ ಟೆಲಿಕಾಮ್ ಇಂಜಿನಿಯರ್ ಪಿ. ಹರಿಶ್ಚಂದ್ರರಾವ್ ಹೇಳಿದರು. ಮಾ. 31ರಂದು ಮಂಗಳೂರಿನ ಸರಕಾರಿ ನೌಕರರ ಸಂಘದ ಮಿನಿ ಸಭಾಂಗಣದಲ್ಲಿ ಸಿಐಟಿಯು ಮಂಗಳೂರು ನಗರ ಸಮಿತಿ ಏರ್ಪಡಿಸಿದ್ದ ಮೇ ದಿನ ಆಚರಣಾ ಸಮಿತಿ ರಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

1960ರ ದಶಕದಲ್ಲಿ ಅಂಚೆ, ಟೆಲಿಕಾಂ, ಕೇಂದ್ರ ಸರಕಾರಿ ನೌಕರರೂ ತಮ್ಮ ಬೇಡಿಕೆ ಗಳಿಗಾಗಿ ಸಂಘಟಿತ ಹೋರಾಟ ನಡೆಸಿದ್ದರು. ಇವತ್ತು ಎಲ್ಲ ವರ್ಗದ ದುಡಿಮೆಗಾರ ವರ್ಗದ ಮೇಲೆ ಅನೇಕ ರೀತಿಯ ದಾಳಿಗಳು ನಡೆಯುತ್ತಿದ್ದು, ಕಾರ್ಮಿಕರು ಹೆಚ್ಚು ಹೆಚ್ಚು ಸಮರಶೀಲರಾಗಬೇಕು ಎಂದು ಅವರು ಕರೆ ನೀಡಿದರು.

 ಈ ವರ್ಷದ ಮೇ ದಿನದಂದು ಬಾವುಟಗುಡ್ಡದಿಂದ ಮಂಗಳೂರು ಪುರಭವನದವರೆಗೆ ಚೆಂಡೆವಾದ್ಯ, ವೇಷ ಭೂಷಣಗಳೊಂದಿಗೆ ಆಕರ್ಷಕ ಮೆರ ವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಪುರಭವನದಲ್ಲಿ ನಡೆಯುವ ಸಭೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷಿ್ಮೀ ಭಾಗವಹಿಸಲಿದ್ದಾರೆ. ಕಾರ್ಮಿಕ ಕುಟುಂಬದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿದೆೆ.

ಮೇ ದಿನ ಆಚರಣಾ ಸಮಿತಿಯ ಗೌರ ವಾಧ್ಯಕ್ಷರಾಗಿ ನ್ಯಾಯವಾದಿ ಯಶವಂತ ಮರೋಳಿ, ಕಾರ್ಯಾಧ್ಯಕ್ಷರಾಗಿ ಪಿ. ಹರಿಶ್ಚಂದ್ರರಾವ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂ ರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ಸಭೆಯನ್ನುದ್ದೇಶಿಸಿ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಸಂಘ ಬಿ.ಇ.ಎಫ್.ಐ. ಮುಖಂಡ ಬಿ. ಎಂ. ಮಾಧವ, ಬಂದರು ಶ್ರಮಿಕ ಸಂಘದ ಮುಖಂಡ ಬಿ.ಕೆ. ಇಮ್ತಿಯಾಝ್ ಮತ್ತಿತರರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮಂಗಳೂರು ನಗರ ಸಮಿತಿ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ ವಹಿಸಿದ್ದರು. ಮೇ ದಿನ ಕಾರ್ಯಕ್ರಮದ ಪ್ರಸ್ತಾವನೆಯನ್ನು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಕಾರ್ಯ ದರ್ಶಿ ಸುನಿಲ್ ಕುಮಾರ್ ಬಜಾಲ್ ಮಂಡಿಸಿದರು. ಸಿಐಟಿಯು ಮಂಗಳೂರು ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಖಜಾಂಚಿ ಸಂತೋಷ್ ಶಕ್ತಿನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News