ಕರ್ಣಾಟಕ ಬ್ಯಾಂಕ್‌ನ ನೂತನ ಜಿಎಂಗಳಾಗಿ ಬಾಲಚಂದ್ರ, ಮುರಳೀಧರ, ನಾಗರಾಜ ರಾವ್ ಆಯ್ಕೆ

Update: 2017-04-03 18:40 GMT

 ಮಂಗಳೂರು, ಎ.3: ಕರ್ಣಾಟಕ ಬ್ಯಾಂಕ್‌ನ ಉಪಮಹಾಪ್ರಬಂಧಕರಾದ ಬಾಲಚಂದ್ರ ವೈ.ವಿ., ಮುರಳೀಧರ ಕೃಷ್ಣ ರಾವ್, ನಾಗರಾಜ ರಾವ್ ಬಿ, ಮಹಾ ಪ್ರಬಂ ಧಕರಾಗಿ ಭಡ್ತಿ ಹೊಂದಿ ಕಾರ್ಯನಿರ್ವಹಿಸಲಿದ್ದಾರೆ.

  ಚಿಕ್ಕಮಗಳೂರಿನ ಯಾದಗಿರಿಯ ಎನ್.ಆರ್.ಪುರ ತಾಲೂಕಿನ ಬಾಲಚಂದ್ರ ವೈ.ವಿ. 1995ರಲ್ಲಿ ಬ್ಯಾಂಕ್‌ನ ಪ್ರಬಂಧಕರಾಗಿ 1997ರಲ್ಲಿ ಕಂಪೆನಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 2008ರಲ್ಲಿ ಎಜಿಎಂ ಹಾಗೂ 2011ರಲ್ಲಿ ಬ್ಯಾಂಕ್‌ನ ಡಿಜಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.

ಮಂಗಳೂರಿನ ನಿವಾಸಿಯಾಗಿರುವ ಮುರಳೀಧರ ಕೃಷ್ಣರಾವ್, 1991ರಲ್ಲಿ ಕರ್ಣಾಟಕ ಬ್ಯಾಂಕ್‌ನ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಎರಡೂವರೆ ದಶಕಗಳ ಕಾಲ ಬ್ಯಾಂಕ್‌ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 2004ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ, 2010ರಲ್ಲಿ ಬ್ಯಾಂಕ್‌ನ ಎಜಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಮಾರ್ಚ್ 2013ರಲ್ಲಿ ಇವರು ಬ್ಯಾಂಕ್‌ನ ಡಿಜಿಎಂ ಆಗಿ ಮುಂಭಡ್ತಿ ಹೊಂದಿದ್ದಾರೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರದ ಬೈಕಾಡಿಯ ನಾಗರಾಜ ರಾವ್ ಬಿ. 1984ರಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದ್ದರು. ಮೂರು ದಶಕಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ ಇವರು 2007ರಲ್ಲಿ ಮುಖ್ಯ ಪ್ರಬಂಧಕ ರಾಗಿ ಮುಂಬೈ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2011ರಲ್ಲಿ ಎಜಿಎಂ ಆಗಿದ್ದು, 2013ರಲ್ಲಿ ಉಪಮಹಾ ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು. ಇದೀಗ ಜನರಲ್ ಮ್ಯಾನೇಜರ್ ಆಗಿ ಭಡ್ತಿ ಹೊಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News