×
Ad

ಹಿರಿಯ ನಟ ವಿನೋದ ಖನ್ನಾ ಆಸ್ಪತ್ರೆಗೆ ದಾಖಲು

Update: 2017-04-05 14:36 IST

ಮುಂಬೈ,ಎ.5: ತೀವ್ರ ನಿರ್ಜಲೀಕರಣದಿಂದ ಬಳಲುತ್ತಿರುವ ಹಿರಿಯ ಬಾಲಿವುಡ್ ನಟ, ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ವಿನೋದ್ ಖನ್ನಾ (70) ಅವರನ್ನು ಇಲ್ಲಿಯ ಗಿರ್ಗಾಂವ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರೀಗ ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಖನ್ನಾರ ಪುತ್ರ ರಾಹುಲ್ ಇಂದಿಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ರಾಹುಲ್ ಖನ್ನಾ ಮತ್ತು ನಟ ಅಕ್ಷಯ ಖನ್ನಾ ಅವರು ವಿನೋದ್ ಖನ್ನಾರ ಮೊದಲ ಪತ್ನಿಯ ಮಕ್ಕಳಾಗಿದ್ದು, ಸಾಕ್ಷಿ ಮತ್ತು ಶ್ರದ್ಧಾ ಎರಡನೇ ವಿವಾಹದಲ್ಲಿ ಜನಿಸಿದ ಮಕ್ಕಳಾಗಿದ್ದಾರೆ.

ಲೋಕಸಭೆಯಲ್ಲಿ ಪಂಜಾಬಿನ ಗುರುದಾಸಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಖನ್ನಾ ತನ್ನ 49 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ 140ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಫಿಲ್ಮ್‌ಫೇರ್ ಜೀವಿತಾವಧಿ ಸಾಧನೆ ಪ್ರಶಸ್ತಿಗೆ ಪಾತ್ರರಾಗಿರುವ ಅವರು ಹಾಲಿ ಕೇಂದ್ರ ಸಚಿವೆ ಸ್ಮತಿ ಇರಾನಿಯವರು ನಿರ್ಮಿಸಿದ್ದ ‘ಮೇರೆ ಅಪ್ನೆ ’ ಟಿವಿ ಧಾರಾವಾಹಿಯಲ್ಲಿಯೂ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News