ಸಮುದಾಯ ಬಾನುಲಿ ಕೇಂದ್ರಗಳಿಂದ ಆಕಾಶವಾಣಿಯ ವಾರ್ತೆಗಳ ಪ್ರಸಾರ

Update: 2017-04-05 09:12 GMT

 ಹೊಸದಿಲ್ಲಿ, ಎ.5: ಇನ್ನು ಮುಂದೆ ಸಮುದಾಯ ರೇಡಿಯೊ ಕೇಂದ್ರಗಳು ಆಕಾಶವಾಣಿಯ ಸುದ್ದಿಗಳನ್ನು ಪ್ರಸಾರ ಮಾಡಲಿದ್ದು,ಏಳು ನಿಮಿಷಗಳ ಕಾಲ ಜಾಹೀರಾತು ನೀಡಲು ಇಂತಹ ಬಾನುಲಿ ಕೇಂದ್ರಗಳಿಗೆ ಅವಕಾಶ  ಕಲ್ಪಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್‌ ಇಂದು ಲೋಕಸಭೆಗೆ ತಿಳಿಸಿದರು.

ಸಮುದಾಯ ಬಾನುಲಿ ಕೇಂದ್ರಗಳು ಕೇಂದ್ರ  ಹಾಗೂ ರಾಜ್ಯ ಸರಕಾರಗಳ  ಪ್ರಾಯೋಜಿತ ಕಾರ್ಯಕ್ರಮಗಳ ಪ್ರಸಾರ ಮಾಡಲು ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು.

ಪ್ರಶ್ನೋತ್ತರ ವೇಳೆ ಮಾತನಾಡಿದ ಸಚಿವ ರಾಥೋಡ್‌ ಅವರು  ಇಂತಹ ರೇಡಿಯೊ ಕೇಂದ್ರಗಳಿಗೆ ಉಪಕರಣಗಳ ಖರೀದಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಶೇ 50ರಿಂದ 75ಕ್ಕೆ ಏರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ದೇಶದ ಈಶಾನ್ಯ ರಾಜ್ಯಗಳಲ್ಲಿ ಸಮುದಾಯ ರೇಡಿಯೊ ಕೇಂದ್ರಗಳಿಗೆ ಶೇ 90ರಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ ಒಟ್ಟು 206 ಸಮುದಾಯ ರೇಡಿಯೊ ಕೇಂದ್ರಗಳು ಕಾರ್ಯಾಚರಿಸುತ್ತಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News