×
Ad

ಕೆನಡಾದ ಫೋಟೋ ಹಾಕಿ ದಿಲ್ಲಿ ಎಂದು ನಗೆಪಾಟಲಿಗೀಡಾದ ದಿಲ್ಲಿ ಬಿಜೆಪಿ

Update: 2017-04-06 23:38 IST

ಹೊಸದಿಲ್ಲಿ, ಎ.6: ದಿಲ್ಲಿ ಬಿಜೆಪಿಯ ಅಧಿಕೃತ ಟ್ವಿಟರ್‌ನಲ್ಲಿ ಕೆನಡಾದ ರಿಚ್‌ಮಂಡ್ ನಗರದ ಚಿತ್ರ ಹಾಕಿ ಇದನ್ನು ದಿಲ್ಲಿಯ ನಗರದ ರಸ್ತೆ ಎ್ನುವ ಮೂಲಕ ನಗೆ ಪಾಟಲಿಗೀಡಾಗಿದೆ.

ದಕ್ಷಿಣ ದಿಲ್ಲಿಯ 2 ಲಕ್ಷ ಸೋಡಿಯಂ ದಾರಿ ದೀಪಗಳನ್ನು ಬದಲಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಿದೆ . ಇದರಿಂದ 7 ವರ್ಷಗಳ ಅವಧಿಯಲ್ಲಿ ದಿಲ್ಲಿ ನಗರಪಾಲಿಕೆಗೆ ಸುಮಾರು 425 ಕೋಟಿ ರೂ. ಉಳಿತಾಯವಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕೆಲವರು ಈ ತಪ್ಪನ್ನು ಕಂಡು ಹಿಡಿದಿದ್ದರೆ, ನಗರಪಾಲಿಕೆ ಅಧಿಕಾರಿಗಳು ಈ ತಪ್ಪನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲ. ಬಿಜೆಪಿ ತಪ್ಪು ಚಿತ್ರಗಳನ್ನು ಪ್ರಕಟಿಸಿ ನಗೆಪಾಟಲಿಗೀಡಾಗುವ ಸಂದರ್ಭ ಇದು ಹೊಸದೇನಲ್ಲ. 

ವಾರಾಣಸಿಯಲ್ಲಿ ನಡೆದ ಚುನಾವಣೆಯ ಸಂದರ್ಭ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಪ್ರಧಾನಿ ಮೋದಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುವ ಚಿತ್ರ ಇತ್ತು. ಇಲ್ಲಿ ಸಭೆಯಲ್ಲಿದ್ದ ಜನರ ಚಿತ್ರವನ್ನು ಕಾಪಿ ಪೇಸ್ಟ್ ಮಾಡಲಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News