ಸಿಟಿ ಸೆಂಟರ್‌ನಲ್ಲಿ ಬೃಹತ್ ಗೀಜಗನ ಗೂಡು!

Update: 2017-04-06 18:32 GMT

ಮಂಗಳೂರು, ಎ.6: ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿ 18 ಅಡಿ ಎತ್ತರ ಹಾಗೂ 70 ಕೆ.ಜಿ. ಭಾರದ ಗೀಜಗನ ಗೂಡನ್ನು ಮಾಲ್‌ನ ಸಂರಕ್ಷಣಾ ಅಧಿಕಾರಿ ನಾರಾಯಣ ಬೈಂದೂರು ಉದ್ಘಾಟಿಸಿದರು. ಕರಾವಳಿ ಚಿತ್ರಕಲಾ ಚಾವಡಿ ಆಯೋಜಿಸುವ 5ನೆ ಕುಡ್ಲ ಕಲಾಮೇಳದ ಪ್ರಚಾರದ ಅಂಗವಾಗಿ ಈ ಗೂಡನ್ನು ಪ್ರತಿಷ್ಠಾಪಿಸಲಾಗಿದೆ.

ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಅನಂತ ಪದ್ಮನಾಭ ಮಾತನಾಡಿ, ಗೀಜಗನ ಗೂಡು ನಗರದಲ್ಲಿ ಕಣ್ಮರೆಯಾಗುತ್ತಿದೆ. ಪಕ್ಷಿಗಳಿಗೆ ನಗರದಲ್ಲಿ ಜಾಗವಿಲ್ಲದೇ ಒದ್ದಾತ್ತಿವೆ. ಇಂತಹ ಕಾರ್ಯಕ್ರಮದ ಮೂಲಕ ನಗರ ಪ್ರದೇಶ ಜನರಿಗೆ ಜಾಗೃತಿ ಮೂಡಿಸುವ ನಡೆಯುತ್ತಿದೆ ಎಂದರು.

ಕಲಾವಿದೇ ಸ್ವಪ್ನಾ ನೊರೊನ್ಹಾ ಮಾತನಾಡಿದರು. ಹಿರಿಯ ಕಲಾವಿದ ಬಿ.ಗಣೇಶ್ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ, ಸಿಟಿ ಸೆಂಟರ್ ಮಾಲ್‌ನ ಪ್ರದೀಪ್ ಕುಮಾರ್, ದಿನೇಶ್ ಹೊಳ್ಳ ಉಪಸ್ಥಿತರಿದ್ದರು.

200ಕ್ಕೂ ಅಧಿಕ ಬೈಹುಲ್ಲಿನ ಕಟ್ಟುಗಳಿಂದ ಈ ಗೂಡನ್ನು ರಚಿಸಲಾಗಿದೆ. ಕಲಾವಿದರಾದ ಸುಧೀರ್ ಕುಮಾರ್ ಜಿ. ಕಾವೂರು, ಬಾಲಕೃಷ್ಣ ಶೆಟ್ಟಿ ಮಂಚಿ, ಪೂರ್ಣೇಶ್ ಪಿ., ನವೀನ್ ಬಂಗೇರಾ ಕೋಡಿಕಲ್ ಮತ್ತು ಓಂಪ್ರಕಾಶ್ ಈ ಗೀಜುಗನ ಗೂಡು ತಯಾರಿಸಲು ಐದು ದಿನಗಳನ್ನು ತೆಗೆದುಕೊಂಡಿದ್ದಾರೆ. ಇದೇ ರೀತಿಯಲ್ಲಿ ಕುಂಚ ವೀರ ಕಲಾಕೃತಿಯನ್ನು ನಗರದ ೆರಂ ಮಾಲ್‌ನಲ್ಲಿ ಸ್ಥಾಪಿಸಲಾಗಿದ್ದು, ೆರಂ ಮಾಲ್‌ನ ಮ್ಯಾನೇಜರ್ ಮನೋಜ್ ಸಿಂಗ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News