×
Ad

ಜ್ಞಾನಭಾರತಿ ಜಾಗ ನುಂಗಿ ಹಾಕಿದವರು ಯಾರು..?

Update: 2017-04-07 00:18 IST

ಮಾನ್ಯರೆ,

ಬೆಂಗಳೂರಲ್ಲಿ ಒತ್ತುವರಿದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್.

 ಈ ಕ್ಯಾಂಪಸ್‌ನಲ್ಲಿ 1,112 ಎಕರೆ ಜಾಗವಿದೆ. ಆದರೆ, ಇದರಲ್ಲಿ ನೂರಾರು ಎಕರೆ ಜಾಗವನ್ನ್ನು ಒತ್ತುವರಿ ಮಾಡಲಾಗಿದೆ ಎಂಬುದು ಇದೀಗ ಬಯಲಾಗಿದೆ. ಆದರೆ ಈ ಜಾಗವನ್ನು ಯಾರು ಒತ್ತುವರಿ ಮಾಡಿದ್ದಾರೆ ಎಂಬುದು ವಿವಿಗೆ ಇನ್ನೂ ಅರಿವಿಲ್ಲವಂತೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ವಿವಿ ಅಧಿಕಾರಿಗಳು ತಬ್ಬಿಬ್ಬಾಗುತ್ತಾರೆ. ಮೇಲ್ನೋಟಕ್ಕೆ ವಿವಿ ಜಾಗವನ್ನು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಕಬಳಿಸಿದ್ದಾರೆ ಎಂಬ ಆರೋಪವಿದೆ. ವಿಶ್ವವಿದ್ಯಾನಿಲಯ ಇರಬೇಕಾದ ಸ್ಥಳದಲ್ಲಿ ದೇವಸ್ಥಾನ, ವಾಣಿಜ್ಯ ಸಂಕೀರ್ಣ, ಪೆಟ್ರೋಲ್ ಪಂಪ್ ಸೇರಿ ವಿವಿಧ ಕಟ್ಟಡಗಳು ತಲೆಯೆತ್ತಿವೆ. ಇವಕ್ಕೆಲ್ಲಾ ಹೆೇಗೆ ಅನುಮತಿ ನೀಡಲಾಯಿತು ಎನ್ನುವುದೇ ಮೂಲ ಪ್ರಶ್ನೆ.
 
ದಾಖಲಾತಿ ಪರಿಶೀಲನೆ ವೇಳೆ ಇದೆಲ್ಲಾ ಗೊತ್ತಾಗಲಿಲ್ಲವೇ..? ಅಥವಾ ಗೊತ್ತಿದ್ದೂ ಅಧಿಕಾರಿಗಳು ತಪ್ಪು ಮಾಡಿದರೇ..? ಕೂಡಲೇ ರಾಜ್ಯ ಸರಕಾರ ವಿವಿಯ ಜಾಗವನ್ನು ಮರು ಸರ್ವೇ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ಮರು ಸ್ವಾಧೀನಪಡಿಸಿಕೊಳ್ಳುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. 

Writer - ಶಂಶೀರ್ ಬುಡೋಳಿ, ಬೆಂಗಳೂರು

contributor

Editor - ಶಂಶೀರ್ ಬುಡೋಳಿ, ಬೆಂಗಳೂರು

contributor

Similar News