×
Ad

ರೈಲಿನ ಬಾಗಿಲಿನಲ್ಲಿ ಸಿಲುಕಿಕೊಂಡ ಮಹಿಳೆ: ವೈರಲ್ ವೀಡಿಯೊ

Update: 2017-04-07 16:46 IST

ನ್ಯೂಯಾರ್ಕ್, ಎ.7: ಭೂಗರ್ಭ ಮೆಟ್ರೊ ರೈಲಿನಿಂದ ಇಳಿಯುತ್ತಿರುವಾಗ ಬಾಗಿಲಿನಲ್ಲಿ ತಲೆ ಸಿಲುಕಿ ಕೊಂಡ ಮಧ್ಯವಯಸ್ಕ ಮಹಿಳೆಯನ್ನು ತಿರುಗಿಯೂನೋಡದೆ ಜನರು ದಾಟಿ ಹೋಗುತ್ತಿರುವ ದೃಶ್ಯವಿರುವ ವೀಡಿಯೊ ವೈರಲ್‌ಆಗಿದೆ. ನ್ಯೂಯಾರ್ಕ್ ಸಿಟಿ ಸಬ್‌ವೇ ಸ್ಟೇಶನ್‌ನಲ್ಲಿ ಘಟನೆ ನಡೆದಿದೆ. ಮಹಿಳೆಯ ಹ್ಯಾಂಡ್ ಬ್ಯಾಗ್ ಮತ್ತುತಲೆ ಬಾಗಿಲಿನ ಹೊರಗೆ ಶರೀರ ರೈಲಿನ ಒಳಗೆ ಸಿಕ್ಕಿಬಿದ್ದ ಸ್ಥಿತಿಯಲ್ಲಿ ಮಹಿಳೆ ಒದ್ದಾಡುತಿದ್ದರೂ ಅವರ ನೆರವಿಗೆ ಯಾರೂ ಬರಲಿಲ್ಲ. ಮೆಟ್ರೊಪೊಲಿಟಿನ್ ಟ್ರಾನ್ಸ್‌ಫೋರ್ಟೇಶನ್ ಅಥಾರಿಟಿಯ ಉದ್ಯೋಗಿಯ ಯುನಿಫಾರ್ಮ್ ಧರಿಸಿದ ಮಹಿಳಾ ಉದ್ಯೋಗ ಕೂಡಾ ಅವರನ್ನು ದಾಟಿ ಹೋಗುತ್ತಿದ್ದಾರೆ. ಪ್ಲಾಟ್‌ಫಾರ್ಮ್‌ಗೆ ಬಂದ ಇನ್ನೊಂದು ರೈಲಿನ ಪ್ರಯಾಣಿಕ ವೀಡಿಯೊ ಚಿತ್ರೀಕರಿಸಿ ಇನ್ಸ್‌ಟ್‌ಗ್ರಾಂನಲ್ಲಿ ಫೋಸ್ಟ್ ಮಾಡಿದ್ದಾನೆ. ವೀಡಿಯೊ ಫೋಸ್ಟ್ ಆಗಿ 12 ಗಂಟೆಗಳಲ್ಲಿ 13 ಲಕ್ಷ ಮಂದಿ ನೋಡಿದ್ದಾರೆ. ತಲೆಸಿಲುಕಿ ಕೊಂಡಿದ್ದರು ಮಹಿಳೆ ಯಾರನ್ನೂ ನೆರವಿಗೆ ಕರೆದಿಲ್ಲ. ಮತ್ತು ಬೊಬ್ಬೆಹೊಡೆದಿಲ್ಲ. ರೈಲುಮುಂದೆ ಹೋಗುವ ಮೊದಲು ಅವರನ್ನು ರಕ್ಷಿಸಲಾಯಿತೇ ಅಥವಾ ಅವರು ಗಾಯಗೊಂಡಿದ್ದಾರೆಯೇ ಎನ್ನುವ ವಿವರ ವೀಡಿಯೊ ದೃಶ್ಯದಲ್ಲಿ ತೋರಿಸಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News