ಭಾರತ, ಇಸ್ರೇಲ್ 12,857 ಕೋಟಿ ರೂ. ಶಸ್ತ್ರಾಸ್ತ್ರ ಒಪ್ಪಂದ
Update: 2017-04-07 20:40 IST
ಜೆರುಸಲೇಂ, ಎ. 7: ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಲು ಇಸ್ರೇಲ್ ಭಾರತದೊಂದಿಗೆ ಸುಮಾರು 200 ಕೋಟಿ ಡಾಲರ್ (ಸುಮಾರು 12,857 ಕೋಟಿ ರೂಪಾಯಿ) ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಇಸ್ರೇಲ್‌ನ ಸರಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಸುಧಾರಿತ ಮಧ್ಯಮ ವ್ಯಾಪ್ತಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳನ್ನು ಭಾರತೀಯ ಸೇನೆಗೆ ಪೂರೈಸಲಿದೆ.
ಸ್ವದೇಶದಲ್ಲೇ ಅಭಿವೃದ್ಧಿಪಡಿಸಿದ ಭಾರತೀಯ ವಿಮಾನವಾಹಕ ನೌಕೆಗಾಗಿ ದೀರ್ಘ ವ್ಯಾಪ್ತಿಯ ವಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನೂ ತಾನು ಪೂರೈಸುವುದಾಗಿ ಐಎಐ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಐಎಐ ತಿಳಿಸಿದೆ.