'ರಶ್ಯದ ಹಸ್ತಕ್ಷೇಪ ಸಿಐಎಗೆ ಮೊದಲೇ ಗೊತ್ತಿತ್ತು'
Update: 2017-04-07 22:08 IST
ವಾಶಿಂಗ್ಟನ್, ಎ. 7: ಕಳೆದ ವರ್ಷ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿ, ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವ ಪುರಾವೆ ಈಗ ಭಾವಿಸಿರುವುದಕ್ಕಿಂತಲೂ ಮುಂಚಿತವಾಗಿಯೇ ಸಿಐಎಗೆ ಲಭಿಸಿತ್ತು ಎಂದು 'ನ್ಯೂಯಾರ್ಕ್ ಟೈಮ್ಸ್' ಗುರುವಾರ ವರದಿ ಮಾಡಿದೆ.
ನವೆಂಬರ್ 8ರ ಚುನಾವಣೆಯಲ್ಲಿ ಟ್ರಂಪ್ ಗೆದ್ದ ತಿಂಗಳುಗಳ ಬಳಿಕವೂ ರಶ್ಯದ ಹಸ್ತಕ್ಷೇಪದ ಸುದ್ದಿ ಬಹಿರಂಗಗೊಂಡಿರಲಿಲ್ಲ.