×
Ad

ಕಸದ ರಾಶಿಗೆ ಮುಕ್ತಿ ನೀಡಿ

Update: 2017-04-08 00:03 IST

ಮಾನ್ಯರೆ,

ಪರಿಸರದ ದಿನ ಮಾತ್ರವೇ ನಮಗೆ ನಮ್ಮ ಪರಿಸರ ಎಂಬ ಭಾವನೆ ಉಕ್ಕಿ ಬರುತ್ತದೆ. ಆದರೆ ದಿನದಿಂದ ದಿನಕ್ಕೆ ನಮ್ಮ ಸುತ್ತಲಿನ ಪರಿಸರವನ್ನು ನಾವೇ ಹಾಳುಮಾಡುತ್ತಿದ್ದೇವೆ.
ದಾವಣೆಗೆರೆಯ ನಿಟ್ಟುವಳ್ಳಿ, ಹೊಂಡದ ಸರ್ಕಲ್, ಭರತ್ ಕಾಲನಿ, ಮಂಡಿ ಪೇಟೆ, ಅವರಗೆರೆ, ತೊಳಹುಣಸೆ ಮುಂತಾದ ಕಡೆಗಳಲ್ಲಿ ಕಸದ ತೊಟ್ಟಿಗಳು ಕಾಣೆಯಾಗಿದ್ದು ಕಸದ ರಾಶಿಗಳು ರಸ್ತೆಯೆಲ್ಲೆಡೆ ಹರಡಿಕೊಂಡಿವೆ. ಅದರಲ್ಲೂ ಮಂಡಿಪೇಟೆಯು ಮಾರುಕಟ್ಟೆಯಾಗಿದ್ದು ತರಕಾರಿ ಮಾರಿದ ನಂತರ ಕಸವನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ ಕಸದ ಸಮಸ್ಯೆ ಉಲ್ಬಣಿಸುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಗಮನಹರಿಸಿಯಾರೇ?

Similar News