ಭೂಮಿ ಸಮೀಪದಲ್ಲಿ ಹಾದು ಹೋಗುವ ಬೃಹತ್ ಕ್ಷುದ್ರಗ್ರಹ
Update: 2017-04-08 20:53 IST
ವಾಶಿಂಗ್ಟನ್, ಎ. 8: ಭೂಮಿಗೆ ಸಮೀಪದ ಬೃಹತ್ ಕ್ಷುದ್ರಗ್ರಹವೊಂದು ಎಪ್ರಿಲ್ 19ರಂದು ಸುರಕ್ಷಿತವಾಗಿ ಭೂಮಿಯನ್ನು ಹಾದುಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
ಮೂರು ವರ್ಷಗಳ ಹಿಂದೆ ಪತ್ತೆಯಾದ ಈ ಕ್ಷುದ್ರಗ್ರಹವನ್ನು ‘2014ಜೆಒ25’ ಎಂಬುದಾಗಿ ಹೆಸರಿಸಲಾಗಿದ್ದು, ಸುಮಾರು 2,000 ಅಡಿ ಗಾತ್ರವನ್ನು ಹೊಂದಿದೆ.ಅದು ಸುಮಾರು 18 ಲಕ್ಷ ಕಿಲೋಮೀಟರ್ ಸುರಕ್ಷಿತ ಅಂತರದಲ್ಲಿ ಭೂಮಿಯನ್ನು ಹಾದುಹೋಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದು ಭೂಮಿ ಮತ್ತು ಸೂರ್ಯನ ನಡುವಿನ ಅಂತರದ 4.6 ಪಟ್ಟು ಆಗಿರುತ್ತದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.‘‘ಈ ಕ್ಷುದ್ರಗ್ರಹವು ಭೂಮಿಯೊಂದಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಇಲ್ಲವಾದರೂ, ಈ ಗಾತ್ರದ ಕ್ಷುದ್ರಗ್ರಹವೊಂದು ಇಷ್ಟೊಂದು ಸಮೀಪದಲ್ಲಿ ಭೂಮಿಯನ್ನು ಹಾದು ಹೋಗುವುದು ಇದೇ ಮೊದಲ ಬಾರಿಯಾಗಿದೆ’’ ಎಂದು ನಾಸಾ ಹೇಳಿದೆ.