ಸ್ವೀಡನ್: ದಾಳಿಗೈದ ಟ್ರಕ್ ಚಾಲಕನ ಬಂಧನ
ಸ್ಟಾಕ್‌ಹೋಮ್ (ಸ್ವೀಡನ್), ಎ. 8: ‘ಭಯೋತ್ಪಾದನಾ ಕೃತ್ಯ ನಡೆಸಿದ ಶಂಕೆ’ಯಲ್ಲಿ ಬಂಧಿಸಲ್ಪಟ್ಟಿರುವ ವ್ಯಕ್ತಿಯು ಶುಕ್ರವಾರ ಸ್ವೀಡನ್‌ನ ಸ್ಟಾಕ್‌ಹೋಮ್ ನಗರದಲ್ಲಿ ಜನರ ಗುಂಪೊಂದರ ಮೇಲೆ ಹರಿದ ಟ್ರಕ್‌ನ ಚಾಲಕನಾಗಿರುವ ಸಾಧ್ಯತೆಯಿದೆ ಎಂದು ಸ್ವೀಡನ್ ಪೊಲೀಸರು ಶನಿವಾರ ತಿಳಿಸಿದರು.
‘‘ಬಂಧಿಸಲ್ಪಟ್ಟಿರುವ ವ್ಯಕ್ತಿಯು ಭಯೋತ್ಪಾದನಾ ಕೃತ್ಯವನ್ನು ನಡೆಸಿದವನು ಎಂದು ನಾವು ಶಂಕಿಸಿದ್ದೇವೆ’’ ಎಂದು ಸ್ಟಾಕ್‌ಹೋಮ್ ಪೊಲೀಸ್ ವಕ್ತಾರರೋರ್ವರು ತಿಳಿಸಿದರು. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಒಂಬತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ.
ಬಂಧಿತನು 39 ವರ್ಷದ ಉಝ್ಬೆಕ್ ಮೂಲದ ವ್ಯಕ್ತಿ ಎಂಬುದಾಗಿ ಪತ್ರಿಕೆಯೊಂದು ಹೇಳಿದೆ.ಇದು ಭಯೋತ್ಪಾದಕ ಕೃತ್ಯ ಎನ್ನುವುದು ಸಾಬೀತಾದರೆ, ಸ್ವೀಡನ್‌ನಲ್ಲಿ ನಡೆದ ಮೊದಲ ಇಂಥ ಕೃತ್ಯವಾಗುತ್ತದೆ.ಕದ್ದ ಬಿಯರ್ ಟ್ರಕ್ಕೊಂದು ಶುಕ್ರವಾರ ಅಪರಾಹ್ನ 3 ಗಂಟೆಯ ವೇಳೆಗೆ ಡ್ರಾಟ್ನಿಂಗಟನ್‌ನ ಜನನಿಬಿಡ ಅಂಗಡಿ ಮತ್ತು ಜನಪ್ರಿಯ ಪಾದಚಾರಿ ರಸ್ತೆಯ ಮೇಲೆ ಹರಿಯಿತು.