ಅಮೆರಿಕ: ಆಡಳಿತ ಹುದ್ದೆಗೆ ಇಬ್ಬರು ಭಾರತೀಯರು
Update: 2017-04-08 21:12 IST
ವಾಶಿಂಗ್ಟನ್, ಎ. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಮಹತ್ವದ ಆಡಳಿತಾತ್ಮಕ ಹುದ್ದೆಗಳಿಗೆ ಇಬ್ಬರು ಭಾರತೀಯ ಅಮೆರಿಕನ್ನರನ್ನು ನೇಮಿಸಿದ್ದಾರೆ.
ವಿಶಾಲ್ ಅಮಿನ್‌ರನ್ನು ಇಂಟಲೆಕ್ಚುವಲ್ ಪ್ರಾಪರ್ಟಿ ಎನ್‌ಫೋರ್ಸ್‌ಮೆಂಟ್ ಕೋಆರ್ಡಿನೇಟರ್ ಆಗಿ ಮತ್ತು ನಿಯೋಮಿ ರಾವ್ ಅವರನ್ನು ಆಫಿಸ್ ಆಫ್ ಇನ್‌ಫರ್ಮೇಶನ್ ಆ್ಯಂಡ್ ರೆಗ್ಯುಲೇಟರಿ ಅಫೇರ್ಸ್‌ನ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಕಾಪಿರೈಟ್, ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್‌ಗಳಿಗೆ ಸಂಬಂಧಿಸಿ ಅಮೆರಿಕದ ಕಾನೂನು ಅನುಷ್ಠಾನ ತಂತ್ರಗಾರಿಕೆಯನ್ನು ಸಮನ್ವಯಗೊಳಿಸುವುದು ಹಾಗೂ ಫೆಡರಲ್ ನಿರ್ಬಂಧಗಳ 75 ಶೇಕಡದಷ್ಟನ್ನು ತೆಗೆದುಹಾಕುವ ಅಧ್ಯಕ್ಷರ ಯೋಜನೆಯ ಉಸ್ತುವಾರಿ ನೋಡಿಕೊಳ್ಳುವುದು ಅವರ ಜವಾಬ್ದಾರಿಗಳಾಗಿವೆ.