×
Ad

ಪಾಟ್ನಾ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ

Update: 2017-04-09 10:42 IST

ಪಾಟ್ನಾ, ಎ.9: ಪಾಟ್ನಾ ರಾಜಧಾನಿ ಎಕ್ಸ್ ಪ್ರೆಸ್ ನ ಮೂರು ಬೋಗಿಗಳಿಗೆ ನುಗ್ಗಿದ ಡರೋಡೆಕೋರರ ತಂಡವೊಂದು ಪ್ರಯಾಣಿಕರಿಗೆ ಹಲ್ಲೆ ನಡೆಸಿ ನಗ ನಗದನ್ನು ದೋಚಿದ ಘಟನೆ ಬಿಹಾರ್ ನ ಬಕ್ಸಾರ್ ನಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.

ಬೆಳಗ್ಗಿನ ಜಾವ 3:15ರ ಹೊತ್ತಿಗೆ ಈ ಘಟನೆ ನಡೆದಿದ್ದು, ದರೋಡೆಕೋರರು ರೈಲಿನ ಬೋಗಿಗಳಿಗೆ ನುಗ್ಗಿ ಪ್ರಯಾಣಿಕರಿಗೆ ಹಲ್ಲೆ ನಡೆಸಿ ಅವರ ಬಳಿಯಿದ್ದ ಬೆಲೆ ಬಾಳುವ ಸೊತ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರ ಕೈಗೆ ಸಿಲುಕಿದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಕರ್ತವ್ಯಲೋಪ ಮಾಡಿರುವ ಆರೋಪದಲ್ಲಿ ಕರ್ತವ್ಯದಲ್ಲಿದ್ದ ಓರ್ವ ಇನ್ಸ್ ಪೆಕ್ಟರ‍್ ಮತ್ತು ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಾಟ್ನಾ ಪ್ರದೇಶದಲ್ಲಿ ಎರಡನೆ ಬಾರಿ ರೈಲು ದರೋಡೆ ನಡೆದಿದೆ.2010ರಲ್ಲಿ ಬನ್ಸಿಪುರದಲ್ಲಿ ಏಳು ಬಂದೂಕುಧಾರಿಗಳು ನಿಂತಿದ್ದ ರೈಲಿಗೆ ನುಗ್ಗಿ ಪ್ರಯಾಣಿಕರನ್ನು ಬೆದರಿಸಿ ಅಪಾರ ಪ್ರಮಾಣದಲ್ಲಿ ನಗನಗದನ್ನು ದೋಚಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News