ಮತದಾನ ಮಾಡಿ ಮನೆಗೆ ತೆರಳಿದ ಮಹಿಳೆ ಸಾವು
Update: 2017-04-09 13:21 IST
ಗುಂಡ್ಲುಪೇಟೆ, ಎ.9: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತ ಚಲಾಯಿಸಿ ಮನೆಗೆ ತೆರಳಿದ ಹಂಗಳ ಗ್ರಾಮದ ದೇವಮ್ಮ (93) ಎಂಬವರು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಅವರು ಮತ ಚಲಾಯಿಸಿ ಮನೆಗೆ ತೆರಳಿದ್ದರು. ಮನೆಗೆ ತೆರಳಿದ ಬಳಿಕ ಅಸ್ವಸ್ಥಗೊಂಡ ಮಹಿಳೆ ದೇವಮ್ಮ ನಿಧನರಾದರು.