×
Ad

ಸ್ವೀಡನ್ ದಾಳಿಗೆ ದುಃಖಿಸುವ ಮೋದಿಗೆ ದೇಶದಲ್ಲಾಗುವ ದಾಳಿಗಳು ಕಾಣುವುದಿಲ್ಲವೇ?: ಲಾಲು

Update: 2017-04-09 13:45 IST

ಹೊಸದಿಲ್ಲಿ, ಎ. 9: ಸ್ವೀಡನ್‌ನಲ್ಲಾದ ಟ್ರಕ್ ದಾಳಿಯನ್ನು ಖಂಡಿಸಿದ ಪ್ರಧಾನಿಗೆ ಪುರುಸೊತ್ತಾದರೆ ದೇಶದಲ್ಲಿ ನಡೆಯುತ್ತಿರುವ ಇದೇ ತೆರನಾದ ದಾಳಿಯನ್ನೂ ಕೂಡಾ ಅವರು ಖಂಡಿಸಲಿ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಆಗ್ರಹಿಸಿದ್ದಾರೆ. ರಾಜಸ್ತಾನದ ಅಲ್ವಾರದಲ್ಲಿ ಗೋರಕ್ಷಕರ ದಾಳಿಯಿಂದ ಜಾನುವಾರು ವ್ಯಾಪಾರಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಲಾಲೂ ಪ್ರಧಾನಿಯ ಮೌನವನ್ನು ಟೀಕಿಸಿದ್ದಾರೆ.

ಸ್ಟಾಕ್‌ಹೋಮ್‌ನಲ್ಲಿ ನಡೆದ ದಾಳಿಯನ್ನು ಖಂಡಿಸುತ್ತಿದ್ದೇನೆ. ಬಲಿಪಶುಗಳ ಕುಟುಂಬದ ದುಃಖದಲ್ಲಿತಾನೂ ಭಾಗಿ ಎಂದು ಮೋದಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನ ಬೆನ್ನಿಗೆ ಪ್ರತಿಕ್ರಿಯಿಸಿದ ಲಾಲು “ಯಾವಾಗಲಾದರೂ ಬಿಡುವು ಆದರೆ ನಿಮ್ಮ ಮೂಗಿನ ನೇರ, ಭಾರತಾಂಬೆಯ ಪುತ್ರರ ವಿರುದ್ಧ ಬಲಪಂಥೀಯ ಭಯೋತ್ಪಾದಕರು ನಡೆಸುತ್ತಿರುವ ದಾಳಿಯನ್ನೂ ಖಂಡಿಸಿರಿ" ಎಂದು ಹೇಳಿದ್ದಾರೆ.

ಮಾತ್ರವಲ್ಲ ಸ್ವೀಡನ್ ದಾಳಿಯನ್ನು ಖಂಡಿಸಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೆ ಸಿಂಧಿಯಾರಿಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬೆಂಕಿಯುಗುಳುವ ಉತ್ತರವನ್ನೇ ನೀಡಿದ್ದಾರೆ. ರಾಜಸ್ಥಾನದ ಗೋರಕ್ಷಕರ ದಾಳಿಗಳ ಕುರಿತು ಮುಖ್ಯಮಂತ್ರಿಗೆ ಮಾತುಗಳಿಲ್ಲ ಎಂದು ಸಚಿನ್ ಟ್ವಿಟರ್ ಮುಖೇನ ವಸುಂದರಾ ರಾಜೆ ಸಿಂಧಿಯಾರನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News