×
Ad

ಕೇರಳದ ಅಗ್ನಿಶಾಮಕ ದಳದಲ್ಲಿ ಇನ್ನು ಮಹಿಳಾ ಸಿಬ್ಬಂದಿ !

Update: 2017-04-09 14:59 IST

ತಿರುವನಂತಪುರಂ: ಕೇರಳದ ಅಗ್ನಿಶಾಮಕದ ದಳಕ್ಕೆ ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಹಿಳಾ ಬೆಟಾಲಿಯನ್‌ನ ಬೆನ್ನಿಗೆ ಅಗ್ನಿಶಾಮಕ ದಳಕ್ಕೂ ಮಹಿಳೆಯರನ್ನು ನೇಮಕಗೊಳಿಸುವ ಕ್ರಮಕ್ಕೆ ಕೇರಳ ಸರಕಾರ ಮುಂದಾಗಿದೆ. 100 ಫಯರ್‌ವುಮೆನ್ ಹುದ್ದೆ ನೇಮಕಾತಿ ಶಿಫಾರಸನ್ನು ಗೃಹಸಚಿವಾಲಯ ಅಂಗೀಕರಿಸಿದೆ. ಇನ್ನು ವಿತ್ತಸಚಿವಾಲಯ, ಮತ್ತು ಸಚಿವಸಂಪುಟದ ಅನುಮತಿ ಸಿಕ್ಕಿದರಾಯಿತು. ಕೂಡಲೇ ಪಿಎಸ್‌ಸಿ ಮೂಲಕ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯುವುದೆಂದು ಅಗ್ನಿಶಾಮಕ ದಳದ ಮುಖ್ಯಸ್ಥ ಎ. ಹೇಮಚಂದ್ರನ್ ತಿಳಿಸಿದ್ದಾರೆ. ತಿರುವನಂತಪುರ, ಕೊಚ್ಚಿ, ಕಲ್ಲಿಕೋಟೆ ನಗರಗಳಲ್ಲಿ ತಲಾ ಹದಿನೈದು ಮಹಿಳೆಯರನ್ನು ಮತ್ತು ಇತರ ಜಿಲ್ಲೆಗಳಲ್ಲಿ ತಲಾ ಐದು ಮಹಿಳೆಯರನ್ನು ಅಗ್ನಿಶಾಮಕ ದಳ ಕರ್ತವ್ಯದಲ್ಲಿ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಈಗ 5000 ಪುರುಷರು ಅಗ್ನಿಶಾಮಕ ದಳದಲ್ಲಿದ್ದಾರೆ. 2003ರಲ್ಲಿ ತಮಿಳ್ನಾಡು ಪ್ರಪ್ರಥಮವಾಗಿ ಮಹಿಳೆಯರನ್ನು ಅಗ್ನಿಶಾಮಕ ದಳಕ್ಕೆ ಸೇರಿಸಿಕೊಂಡಿತ್ತು. ನಂತರ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಮಹಿಳೆಯರನ್ನು ಅಗ್ನಿಶಾಮಕ ದಳದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಬೆಟಾಲಿಯನ್ ಮಾತ್ರವಲ್ಲ 2160 ಹುದ್ದೆಗಳನ್ನು ಮಹಿಳೆಯರಿಗಾಗಿ ಸೃಷ್ಟಿಸಲು ಸರಕಾರ ಚಿಂತನೆ ನಡೆಸಿದೆ. ಕೇರಳದಲ್ಲಿ ಈಗ 3724 ಮಹಳೆಯರು ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. ಉದ್ಯೋಗದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ. 15ಕ್ಕೆ ಹೆಚ್ಚಿಸುವುದಕ್ಕೆ ಕೇರಳ ಗೃಹಸಚಿವಾಲಯ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News