ಮಲೆಯಾಳಂ ಕಲಿಸದಿದ್ದರೆ ಶಾಲೆಗಳ ಅನುಮತಿ ರದ್ದು: ಕೇರಳ ಸರಕಾರ

Update: 2017-04-09 09:47 GMT

ತಿರುವನಂತಪುರಂ, ಎ. 9: ಮಲೆಯಾಳಂ ಭಾಷೆಯನ್ನು ಕಲಿಸದ ಶಾಲೆಗಳ ಅನುಮತಿಯನ್ನು ರದ್ದು ಪಡಿಸುವುದಕ್ಕಾಗಿ ಕೇರಳ ಸರಕಾರ ಸೂಕ್ತ ನಿಯಮ ರೂಪಿಸುತ್ತಿದೆ. ಹತ್ತನೆ ತರಗತಿವರೆಗೆ ಮಲೆಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಇಲ್ಲದಿದ್ದರೆ ಅನುಮತಿಯನ್ನು ಕಳಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ (ಆದ್ಯಾದೇಶ) ಸಿದ್ಧಪಡಿಸಲಾಗಿದೆ.

 ಮುಂದಿನ ಸಚಿವಸಂಪುಟ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ. ಸಿಬಿಎಸ್‌ಇ. ಐಸಿಎಸ್‌ಇ ಶಾಲೆಗಳ ಸಂಯೋಜನೆ ಆಯಾಮಂಡಳಿಗಳಿಗೆ ಹೊಂದಿಕೊಂಡು ಇದೆ. ಆದ್ದರಿಂದ ಅಂತಹ ಶಾಲೆಗಳಿಗೆ ನೀಡುವ ನಿರಕ್ಷೇಪಣಾ ದೃಢಪತ್ರಗಳನ್ನು ಸರಕಾರ ಹಿಂದಕ್ಕೆ ಪಡೆಯಲಿದೆ. 12ನೆ ತರಗತಿವರೆಗೆ ಭಾಷೆಯನ್ನು ಕಡ್ಡಾಯಗೊಳಿಸಬೇಕೆನ್ನುವ ವಿಷಯದಲ್ಲಿ ಸಚಿವ ಸಂಪುಟ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

 ಮುಂದಿನ ಅಧ್ಯಯನ ವರ್ಷದಿಂದ ಮಲೆಯಾಳಂ ಕಲಿಕೆ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಸರಕಾರಿ, ಅನುದಾನಿತ, ಸಿಬಿಎಸ್‌ಇ, ಐಸಿಎಸ್‌ಇ, ಖಾಸಗಿ ಶಾಲೆಗಳಿಗೆ ಕಾನೂನು ಅನ್ವಯವಾಗಲಿದೆ. ಗಡಿಪ್ರದೇಶದ ಶಾಲೆಗಳಿಗೂ ಇದು ಅನ್ವಯವಾಗಿದೆ. ಮಲೆಯಾಳಂ ಪರೀಕ್ಷೆ ಇರುತ್ತದೆ. ಶಾಲೆಗಳಲ್ಲಿ ಮಕ್ಕಳು ಮಲೆಯಾಳಂ ಭಾಷೆ ಮಾತಾಡದಂತೆ ತಡೆಯುವುದು ಕಾನೂನು ಬಾಹಿರವಾಗಿದೆ. ಅಂತಹ ಶಾಲೆಗಳಿಗೆ 500ರೂ. ದಂಡ ವಿಧಿಸಲಾಗುವುದು. ಮೂರು ಸಲ ಈ ರೀತಿ ಆದರೆ ಶಾಲೆಗಳ ನಿರಕ್ಷೇಪಣಾ ಪತ್ರವನ್ನು ಹಿಂಪಡೆಯಲಾಗುವುದು. ರಾಜ್ಯದಲ್ಲಿ ನೋಂದಣಿಯಾದ ಶಾಲೆಗಳ ಅನುಮತಿ ರದ್ದುಪಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News