×
Ad

ಜೀವಂತವಿರುವಾಗಲೇ ವಿನೋದ್ ಖನ್ನಾ ನಿಧನಕ್ಕೆ ಶೋಕಾಚರಣೆ ನಡೆಸಿದ ಮೇಘಾಲಯ ಬಿಜೆಪಿ

Update: 2017-04-09 16:47 IST

ಇಂಪಾಲ,ಎ.9 ಹಿರಿಯ ನಟ ವಿನೋದ್ ಖನ್ನಾ ನಿಧನರಾಗಿದ್ದಾರೆ ಎಂಬ ವದಂತಿಯನ್ನು ನಂಬಿ ಅವರು ಜೀವಂತವಿರುವಾಗಲೇ ಎರಡು ನಿಮಿಷದ ಶೋಕಾಚರಣೆಯನ್ನು ಮೇಘಾಲಯ ಬಿಜೆಪಿ ಘಟಕ ನಡೆಸಿದೆ.

ವಿನೋದ್ ಖನ್ನಾ ತೀವ್ರ ಅಸ್ವಸ್ಥರಾಗಿ ಕಾಣುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಅದರ ಬೆನ್ನಿಗೇ ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಶನಿವಾರ ಕೆಲವೆಡೆ ಹರಡಿತು.

ಅದನ್ನೇ ನಂಬಿದ ಮೇಘಾಲಯ ಬಿಜೆಪಿ ಪದಾಧಿಕಾರಿಗಳು ಶೋಕಾಚರಣೆ ಕಾರ್ಯಕ್ರಮ ನಡೆಸಿದ್ದಾರೆ.ಈ ಬಗ್ಗೆ ಅವರು ಬಳಿಕ ಸ್ಪಷ್ಠೀಕರಣ ನೀಡಿದ್ದಾರೆ.

ಹಿರಿಯ ನಟ ವಿನೋದ್ ಖನ್ನಾ ಪಂಜಾಬಿನ ಗುರುದಾಸ್ ಪುರದಿಂದ ಬಿಜೆಪಿ ಸಂಸದರೂ ಆಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News