ಸಿರಿಯ: ನಿರಾಶ್ರಿತರ ಶಿಬಿರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ
Update: 2017-04-09 20:37 IST
ದಮಾಸ್ಕಸ್, ಎ.9: ಜೋರ್ಡನ್ ಗಡಿಭಾಗದ ಸಮೀಪ ಸಿರಿಯದ ಭೂಪ್ರದೇಶದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಸಿರಿಯಾದ ಮರುಭೂಮಿ ಬಳಿ ಇರುವ ರುಕ್‌ಬಾನ್ ಶಿಬಿರದ ಸನಿಹ ಕಾರ್ ಬಾಂಬ್ ಸ್ಫೋಟದಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಬಳಿಕ ಗುರುತಿಸಲಾಗದ ಯುದ್ದವಿಮಾನಗಳು ಈ ಪ್ರದೇಶದ ಮೇಲೆ ಹಾರಿಹೋದವು ಎಂದು ಮೂಲಗಳು ತಿಳಿಸಿವೆ.
ರುಕ್‌ಬಾನ್ ನಿರಾಶ್ರಿತರ ಶಿಬಿರದ ಸನಿಹವೇ ಐಸಿಸ್ ಭಯೋತ್ಪಾದಕರು ಮತ್ತು ಇತರ ಬಂಡುಗೋರ ಗುಂಪುಗಳ ಮಧ್ಯೆ ತೀವ್ರ ಘರ್ಷಣೆ ನಡೆಯುತ್ತಿದೆ ಎಂದೂ ಮೂಲಗಳು ತಿಳಿಸಿವೆ.