×
Ad

ಇಪಿಎಫ್ ಸಂಬಳ ಮಿತಿ 21 ಸಾವಿರಕ್ಕೆ

Update: 2017-04-10 14:56 IST

 ಹೊಸದಿಲ್ಲಿ, ಎ. 10: ಇಪಿಎಫ್(ಎಂಪ್ಲೋಯಿಸ್ ಪ್ರಾವಿಡೆಂಟ್ ಫಂಡ್) ಯೋಜನೆಗೆ ಸೇರ್ಪಡೆಗೊಳ್ಳಲು ಸಂಬಳ ಮಿತಿಯನ್ನು 21,000 ರೂಪಾಯಿಗೆ ಹೆಚ್ಚಿಸಲಾಗಿದೆ. ಈಗ ಸಂಬಳ ಮಿತಿ 15,000 ರೂಪಾಯಿಆಗಿದೆ. ಇಪಿಎಫ್‌ಒ ಮತ್ತು ಕೇಂದ್ರ ಟ್ರಸ್ಟ್ ಬೋರ್ಡ್‌ನ ಸಭೆ ಎಪ್ರಿಲ್ 12ಕ್ಕೆ ದಿಲ್ಲಿಯಲ್ಲಿ ನಡೆಯಲಿದೆ. ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಂಬಳ ಮಿತಿಯನ್ನು ಹೆಚ್ಚಿಸುವುದು ಕೂಡಾ ಅಜೆಂಡಕ್ಕೆ ಸೇರಿಸಲಾಗಿದೆ.

  ಮಿತಿಯನ್ನು ಹೆಚ್ಚಿಸುವುದರಿಂದ ಖಾಸಗಿ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ ಉದ್ಯೋಗಿಗಳಿಗೆ ಉಪಯುಕ್ತವಾಗಲಿದೆ. 25,000 ರೂಪಾಯಿವರೆಗೆ ಪಿಎಫ್‌ಗೆ ಸೇರಿಸಬೇಕೆಂದು ಇಪಿಎಫ್ ಒ(ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಝೇಶನ್) ಕೇಂದ್ರಸರಕಾರವನ್ನು ಆಗ್ರಹಿಸಿತ್ತು. ಆದರೆ ಇದನ್ನು ಕಾರ್ಮಿಕ ಸಚಿವಾಲಯ 21ಸಾವಿರ ರೂಪಾಯಿಗೆ ಮಿತಿಗೊಳಿಸಿತು. ಕೆಲಸ ನೀಡುವವರ ಹಿತವನ್ನು ಪರಿಗಣಿಸಿ ಸಂಬಳ ಮೊತ್ತ ಮಿತಿಯನ್ನು ಕೇಂದ್ರಸರಕಾರ ನಿರ್ಧರಿಸಿದೆ.

ಜೊತೆಗೆ ಇಪಿಎಫ್ ಠೇವಣಿಯ ಬಡ್ಡಿ ದರವನ್ನು ಕಡಿಮೆಗೊಳಿಸಬೇಕೆಂದು ವಿತ್ತಸಚಿವಾಲಯ ಇಪಿಎಫ್‌ಒಗೆ ಸೂಚನೆನೀಡಿದೆ. ಇದೇ ವೇಳೆ ಇಪಿಎಫ್ ಠೇವಣಿಯ ಬಡ್ಡಿದರಲ್ಲಿ 50 ಬೇಸಿಕ್ ಪಾಯಿಂಟು ಕಡಿಮೆಗೊಲಿಸಲು ಸಚಿವಾಲಯ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News