ಸ್ವೀಡನ್ ಟ್ರಕ್ ದಾಳಿ: 2ನೆ ಆರೋಪಿಯ ಬಂಧನ
Update: 2017-04-10 21:04 IST
ಸ್ಟಾಕ್‌ಹೋಮ್ (ಸ್ವೀಡನ್), ಎ. 10: ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಟ್ರಕ್ ಹರಿಸಿ ನಾಲ್ವರನ್ನು ಹತ್ಯೆಗೈದ ಹಾಗೂ 15 ಮಂದಿಯನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರಡನೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಲಯವೊಂದು ರವಿವಾರ ತಿಳಿಸಿದೆ.
ಪ್ರಕರಣದ ಪ್ರಧಾನ ಆರೋಪಿ ಉಝ್ಬೆಕಿಸ್ತಾನದ 39 ವರ್ಷದ ವ್ಯಕ್ತಿಯೋರ್ವನನ್ನು ಸ್ವೀಡನ್ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.