ಬೊಕೊ ಉಗ್ರರ ದಮನಕ್ಕೆ ನೈಜೀರಿಯಕ್ಕೆ ಅಮೆರಿಕ ವಿಮಾನ
Update: 2017-04-10 21:09 IST
ವಾಶಿಂಗ್ಟನ್, ಎ. 10: ಬೊಕೊ ಹರಂ ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಉನ್ನತ ತಂತ್ರಜ್ಞಾನದ ವಿಮಾನಗಳನ್ನು ನೈಜೀರಿಯಕ್ಕೆ ಮಾರಾಟ ಮಾಡಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ.
ನೈಜೀರಿಯದ ಪಡೆಗಳು ನಡೆಸಿರುವ ದೌರ್ಜನ್ಯಗಳ ಬಗ್ಗೆ ಕಳವಳಗಳು ವ್ಯಕ್ತವಾದ ಹೊರತಾಗಿಯೂ ವಿಮಾನಗಳ ಮಾರಾಟಕ್ಕೆ ಸಂಬಂಧಿಸಿದಂತೆ ನೈಜೀರಿಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ.