×
Ad

ಕೆನಡ : ನೀರ್ಗಲ್ಲು ಅಪ್ಪಳಿಸಿ 4 ಪರ್ವತಾರೋಹಿಗಳು ಸಾವು

Update: 2017-04-10 21:30 IST

ಟೊರಾಂಟೊ (ಕೆನಡ), ಎ. 10: ಕೆನಡದ ಉತ್ತರ ವ್ಯಾಂಕೂವರ್‌ನಲ್ಲಿ ನೀರ್ಗಲ್ಲು ಅಪ್ಪಳಿಸಿ ನಾಲ್ವರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.

ಶನಿವಾರ ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ನಾಲ್ವರ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ರಾಯಲ್ ಕೆನಡಿಯನ್ ವೌಂಟಡ್ ಪೊಲೀಸ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.ನಾಪತ್ತೆಯಾಗಿರುವ ಇನ್ನೋರ್ವ ವ್ಯಕ್ತಿಗಾಗಿ ಪೊಲೀಸರು ಈಗಲೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವ್ಯಾಂಕೂವರ್‌ನಿಂದ 33 ಕಿ.ಮೀ. ದೂರದಲ್ಲಿರುವ ವೌಂಟ್ ಹಾರ್ವೆ ಶಿಖರದ ತುದಿಯಲ್ಲಿ ಪರ್ವತಾರೋಹಿಗಳು ಇದ್ದಾಗ ದುರಂತ ಸಂಭವಿಸಿತ್ತು. ಓರ್ವ ಪರ್ವತಾರೋಹಿಯಿಂದ ಪೊಲೀಸರಿಗೆ ತುರ್ತು ಕರೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News