ಅನಂತನಾಗ್ ಉಪಚುನಾವಣೆ ಮುಂದೂಡಿಕೆ
Update: 2017-04-10 23:12 IST
ಶ್ರೀನಗರ, ಎ.10: ಶ್ರೀನಗರದಲ್ಲಿ ರವಿವಾರ ನಡೆದ ಚುನಾವಣಾ ಹಿಂಸಾಚಾರದಲ್ಲಿ ಎಂಟು ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಎಪ್ರಿಲ್ 12ರಂದು ನಿಗದಿಯಾಗಿದ್ದ ಅನಂತನಾಗ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ.
ರವಿವಾರ ಆರಂಭವಾದ ಗಲಭೆ ಸೋಮವಾರ ಕುಲ್‌ಗಾಂವ್, ಪುಲ್ವಾಮಾ, ಶೊಪಿಯಾನ್ ಮತ್ತು ಅನಂತ್‌ನಾಗ್ ಜಿಲ್ಲೆಗಳಿಗೂ ಹಬ್ಬಿದ ಕಾರಣ ಚುನಾವಣೆಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯ ಸೋದರ, ಅನಂತ್‌ನಾಗ್ ಕ್ಷೇತ್ರದಲ್ಲಿ ಪಿಡಿಪಿ ಅಭ್ಯರ್ಥಿಯಾಗಿರುವ ತಸಾದಕ್ ಮುಫ್ತಿ, ಉಪಚುನಾವಣೆಯನ್ನು ಮುಂೂಡುವಂತೆ ಕೋರಿಕೆ ಸಲ್ಲಿಸಿದ್ದರು.