×
Ad

ಅಂಪೈರ್ ತೀರ್ಪಿಗೆ ಅಸಮಾಧಾನ: ರೋಹಿತ್ ಶರ್ಮಗೆ ಛೀಮಾರಿ

Update: 2017-04-10 23:49 IST

 ಮುಂಬೈ, ಎ.10: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್‌ನ 7ನೆ ಪಂದ್ಯದಲ್ಲಿ ಅಂಪೈರ್ ನೀಡಿದ್ದ ಎಲ್‌ಬಿಡಬ್ಲು ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಶರ್ಮಗೆ ಛೀಮಾರಿ ಹಾಕಲಾಗಿದೆ.

 ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನ 10ನೆ ಓವರ್‌ನಲ್ಲಿ ಅಂಪೈರ್ ಸಿ.ಕೆ. ನಂದನ್ ಅವರು ರೋಹಿತ್ ವಿರುದ್ಧ ಎಲ್‌ಬಿಡಬ್ಲು ಔಟ್ ತೀರ್ಪು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ರೋಹಿತ್ ಅಂಪೈರ್‌ರತ್ತ ಬ್ಯಾಟ್‌ನ್ನು ತೋರಿಸಿದ್ದರು. ರೋಹಿತ್ ವಿರುದ್ದ ನೀಡಲಾಗಿದ್ದ ತೀರ್ಪು ನಿಖರವಾಗಿಲ್ಲ ಎಂದು ಟಿವಿ ರಿಪ್ಲೇ ತೋರಿಸುತ್ತಿತ್ತು.

‘‘ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಂಬೈ ನಾಯಕ ರೋಹಿತ್ ಶರ್ಮಗೆ ಮ್ಯಾಚ್ ರೆಫರಿ ಛೀಮಾರಿ ಹಾಕಿದ್ದಾರೆ’’ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News