×
Ad

ಇನ್ನು ಮೊಬೈಲ್ ಮೂಲಕ ಪಿಎಫ್ ಹಿಂಪಡೆಯಲು ಸಾಧ್ಯ

Update: 2017-04-10 23:51 IST

ಹೊಸದಿಲ್ಲಿ, ಎ.10: ಮೊಬೈಲ್ ಆ್ಯಪ್ ಮೂಲಕ ಭವಿಷ್ಯನಿಧಿ(ಪಿಎಫ್) ಹಣವನ್ನು ಹಿಂದಕ್ಕೆ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ತಿಳಿಸಿದರು. ಈ ಹೊಸ ಆ್ಯಪ್ ಅನ್ನು ‘ನೂತನ ಆಡಳಿತಕ್ಕಾಗಿನ ಏಕೀಕೃತ ಮೊಬೈಲ್ ಅಪ್ಲಿಕೇಷನ್’ (ಉಮಂಗ್) ಜೊತೆ ಸಂಘಟಿತಗೊಳಿಸಲಾಗುವುದು. ಈ ಮೂಲಕ ಅಂತರ್ಜಾಲದ ಮೂಲಕ ಭವಿಷ್ಯನಿಧಿ ಪಡೆಯುವ ಬೇಡಿಕೆ ಮಂಡಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದರು. ಭವಿಷ್ಯನಿಧಿ ಇತ್ಯರ್ಥಗೊಳಿಸಲು ಕೋರಿ ಕೈಬರಹದಲ್ಲಿ ಸುಮಾರು 1 ಕೋಟಿ ಅರ್ಜಿಗಳನ್ನು ಇಪಿಎಫ್‌ಒ (ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ)ಗೆ ಕಳುಹಿಸಲಾಗಿದೆ. ಇಪಿಎಫ್‌ಒದ 110ಕ್ಕೂ ಹೆಚ್ಚಿನ ಪ್ರಾದೇಶಿಕ ಕಚೇರಿಗಳನ್ನು ಕೇಂದ್ರದ ಸರ್ವರ್‌ಗೆ ಜೋಡಿಸ ಲಾಗಿದೆ. ಅತೀ ಶೀಘ್ರದಲ್ಲಿಯೇ ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಕೇಂದ್ರ ಕಚೇರಿಯ ಸರ್ವರ್‌ಗೆ ಜೋಡಿಸುವ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News