ಐರ್‌ಲ್ಯಾಂಡ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿಂದೂ ಧರ್ಮ

Update: 2017-04-11 14:09 GMT

ಡಬ್ಲಿನ್, ಎ. 11: ಕ್ರೈಸ್ತ ದೇಶ ಐರ್‌ಲ್ಯಾಂಡ್‌ನಲ್ಲಿ ಹಿಂದೂ ಧರ್ಮವು ವೇಗವಾಗಿ ಬೆಳೆಯುತ್ತಿದೆ. ಭಾರತದ ಹೊರಗೆ ಧರ್ಮದ ಬೆಳವಣಿಗೆ, ಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ ನಗಣ್ಯವಾದರೂ ಮಹತ್ವದ್ದಾಗಿದೆ.

ಐರ್‌ಲ್ಯಾಂಡ್‌ನ ಹಿಂದೂ ಜನಸಂಖ್ಯೆ ಐದು ವರ್ಷಗಳಲ್ಲಿ 34 ಶೇಕಡದಷ್ಟು ಹೆಚ್ಚಿದೆ ಎನ್ನುವುದು ಐರ್‌ಲ್ಯಾಂಡ್‌ನ ಕೇಂದ್ರೀಯ ಅಂಕಿಸಂಖ್ಯೆ ಕಚೇರಿ (ಸಿಎಸ್‌ಒ) 2016 ಎಪ್ರಿಲ್‌ನಲ್ಲಿ ನಡೆಸಿದ ಜನಗಣತಿಯಿಂದ ತಿಳಿದುಬಂದಿದೆ.

ಜನಗಣತಿ ವರದಿಯನ್ನು ಈ ವರ್ಷದ ಎಪ್ರಿಲ್ 6ರಂದು ಬಿಡುಗಡೆಗೊಳಿಸಲಾಗಿದೆ.ಬೆಳವಣಿಗೆಯಲ್ಲಿ ಇಸ್ಲಾಮ್ ಎರಡನೆ ಸ್ಥಾನದಲ್ಲಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ 29 ಶೇಕಡದಷ್ಟು ಹೆಚ್ಚಿದೆ. ಇದಕ್ಕೆ ವ್ಯತಿರಿಕ್ತವಾಗಿ, ಐರ್‌ಲ್ಯಾಂಡ್‌ನಲ್ಲಿ ಒಟ್ಟಾರೆ ಜನಸಂಖ್ಯೆ ಹೆಚ್ಚಳ 3.8 ಶೇಕಡ.

ಐರ್‌ಲ್ಯಾಂಡ್ ಪ್ರಮುಖವಾಗಿ ಕ್ರೈಸ್ತ ದೇಶವಾಗಿದೆ. ದೇಶದ 47.6 ಲಕ್ಷ ಜನಸಂಖ್ಯೆಯಲ್ಲಿ 37.3 ಲಕ್ಷ ಕ್ರೈಸ್ತರಾಗಿದ್ದಾರೆ.

14,000 ಹಿಂದೂಗಳು

2011ರಲ್ಲಿ ಐರ್‌ಲ್ಯಾಂಡ್‌ನಲ್ಲಿ ಸುಮಾರು 10,000 ಹಿಂದೂಗಳಿದ್ದರು. 2016 ಎಪ್ರಿಲ್ ವೇಳೆಗೆ ಈ ಸಂಖ್ಯೆ 14,000ವನ್ನು ತಲುಪಿದೆ.
ಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ಈ ದೇಶದಲ್ಲಿ ಮುಸ್ಲಿಮ್ ಸಮುದಾಯ ಹಿಂದೂಗಳಿಗಿಂತ ಆರು ಪಟ್ಟು ದೊಡ್ಡದು.

2011-16ರ ಅವಧಿಯಲ್ಲಿ ಧರ್ಮಾಧಾರಿತ ಜನಸಂಖ್ಯೆಯಲ್ಲಿ 37.5 ಶೇಕಡ ಹೆಚ್ಚಳವಾದರೆ, ಧರ್ಮವಿಲ್ಲದವರ ಸಂಖ್ಯೆಯಲ್ಲಿ 73.6 ಶೇ. ಹೆಚ್ಚಳವಾಗಿದೆ ಎಂದು ಜನಗಣತಿ ವರದಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News