×
Ad

ಸಗಟು ಔಷಧಿಗಳ ಆಮದು ನಿರುತ್ತೇಜಿಸಲು ಕ್ರಮ: ಸರಕಾರ

Update: 2017-04-11 20:29 IST

 ಹೊಸದಿಲ್ಲಿ,ಎ.11: ದೇಶಿಯ ತಯಾರಕರಿಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಸಗಟು ಔಷಧಿಗಳು ಮತ್ತು ಕ್ರಿಯಾತ್ಮಕ ಔಷಧೀಯ ಘಟಕಗಳ ಆಮದನ್ನು ನಿರುತ್ತೇಜಿಸಲು ಸರಕಾರವು ಸೀಮಾಸುಂಕ ವಿನಾಯಿತಿ ರದ್ದು ಸೇರಿದಂತೆ ವಿವಿಧ ನೀತಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ಈ ವಿಷಯವನ್ನು ತಿಳಿಸಿದ ಸಹಾಯಕ ರಾಸಾಯನಿಕ ಸಚಿವ ಮನ್ಸುಖ್ ಎಲ್.ಮಾಂಡವೀಯ ಅವರು, ಸಗಟು ಔಷಧಿಗಳ ದೇಶಿಯ ತಯಾರಿಕೆಯನ್ನು ಉತ್ತೇಜಿಸಲು ಪರಿಸರ ಸಮ್ಮತಿಯಂತಹ ಅಡಚಣೆಗಳನ್ನು ಸರಕಾರವು ನಿವಾರಿಸುತ್ತಿದೆ ಎಂದು ಹೇಳಿದರು.

ಪ್ರಸ್ತುತ ಭಾರತವು ಕೆಲವು ಅಗತ್ಯ ಔಷಧಿಗಳ ತಯಾರಿಕೆಗಾಗಿ ಚೀನಾದಿಂದ ಸಗಟು ಔಷಧಿಗಳು ಮತ್ತು ಕ್ರಿಯಾತ್ಮಕ ಔಷಧೀಯ ಘಟಕಗಳ ಆಮದನ್ನು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News