×
Ad

ಅಪರೂಪದ ರೋಗಗಳ ಚಿಕಿತ್ಸೆಗಾಗಿ ರಾಷ್ಟ್ರೀಯ ಕರಡು ನೀತಿ ಬಗ್ಗೆ ಚರ್ಚೆ

Update: 2017-04-11 21:44 IST

ಹೊಸದಿಲ್ಲಿ,ಎ.11: ಅಪರೂಪದ ರೋಗಗಳ ಚಿಕಿತ್ಸೆ ಮತ್ತು ಅರ್ಹ ರೋಗಿಗಳಿಗೆ ಆರ್ಥಿಕ ನೆರವು ಪೂರೈಕೆ ಕುರಿತು ರಾಷ್ಟ್ರಿಯ ಕರಡು ನೀತಿಯೊಂದನ್ನು ಚರ್ಚಿಸಲಾಗುತ್ತಿದೆ ಎಂದು ಕೇಂದ್ರವು ಮಂಗಳವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ಈ ವಿಷಯವನ್ನು ತಿಳಿಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು, ಸದ್ಯಕ್ಕೆ ಸರಕಾರವು ಇಂತಹ ರೋಗಗಳಿಗೆ ಇತರ ರಾಷ್ಟ್ರಗಳಲ್ಲಿ ಅನುಮತಿಸಲ್ಪಟ್ಟಿರುವ ಔಷಧಿಗಳ ಕ್ಲಿನಿಕಲ್ ಟ್ರಯಲ್ ಅಗತ್ಯಕ್ಕೆ ವಿನಾಯಿತಿ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News