ಮಂಗಳೂರು ವಿಶ್ವವಿದ್ಯಾನಿಲಯ: ಪದವಿ ಪರೀಕ್ಷೆಗೆ ಐದು ಹೊಸ ಪರೀಕ್ಷಾ ಕೇಂದ್ರಗಳು

Update: 2017-04-11 18:38 GMT

ಮಂಗಳೂರು, ಎ.11: ಮಂಗಳೂರು ವಿಶ್ವವಿದ್ಯಾನಿಲಯವು ಎ.17ರಿಂದ ಆರಂಭವಾಗಲಿರುವ ಪದವಿ ಪರೀಕ್ಷೆಗೆ ಸಂಬಂಧಿಸಿ ಐದು ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆಯಲಿದೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ 216 ಕಾಲೇಜುಗಳ ಒಟ್ಟು 72 ಸಾವಿರ ವಿದ್ಯಾರ್ಥಿಗಳು 115 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಈ ಬಾರಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ ಕಾಲೇಜು, ದ.ಕ. ಜಿಲ್ಲೆಯ ಸುರತ್ಕಲ್‌ನ ಮಿಸ್ಬಾ ಮಹಿಳಾ ಕಾಲೇಜು, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಗುರುದೇವ ಕಾಲೇಜು, ಪುತ್ತೂರಿನ ಮಹಿಳಾ ಕಾಲೇಜುಗಳು ಹೊಸದಾಗಿ ಪರೀಕ್ಷಾ ಕೇಂದ್ರಗಳಾಗಿ ಸೇರ್ಪಡೆಗೊಂಡಿವೆ ಎಂದು ವಿವಿ ಪರೀಕ್ಷಾಂಗ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News