ಈಜಿಪ್ಟ್‌ನ ಮಹಿಳೆ ಇಮಾನ್ ಅಹ್ಮದ್‌ ತೂಕ ಅರ್ಧದಷ್ಟು ಇಳಿಕೆ

Update: 2017-04-12 06:06 GMT

ಮುಂಬೈ, ಎ.12: ಕಳೆದ ಫೆಬ್ರವರಿಯಲ್ಲಿ ತೂಕ ಇಳಿಸಿಕೊಳ್ಳುವುದಕ್ಕಾಗಿ ಮುಂಬೈನ ಸೈಫೀ ಆಸ್ಪತ್ರೆಗೆ ದಾಖಲಾಗಿದ್ದ  ಜಗತ್ತಿನ ಅತಿ ತೂಕದ ಮಹಿಳೆ ಎಂಬ ಖ್ಯಾತಿಯ  ಈಜಿಪ್ಟ್ ಮಹಿಳೆ ಇಮಾನ್ ಅಹ್ಮದ್ ಒಂದು ತಿಂಗಳಲ್ಲೇ ಬರೋಬ್ಬರೀ 242 ಕೆಜಿ ತೂಕ ಕಳೆದುಕೊಂಡಿದ್ದಾರೆ.
500 ಕೆಜಿ ತೂಕವಿದ್ದ ಮಹಿಳೆಯ ಇಮಾನ್ ಅಹ್ಮದ್  242  ಕೆಜಿ ತೂಕ ಕಳೆದುಕೊಂಡಿದ್ದಾರೆ. ಈಗ ಆಕೆ   270 ಕೆ.ಜಿಗಿಂತಲೂ ಕಡಿಮೆ ತೂಕ ಹೊಂದಿದ್ದಾರೆ ಎಂದು ತಜ್ಞ  ವೈದ್ಯ ಡಾ. ಅರ್ಪಣಾ ಭಾಸ್ಕರ್ ತಿಳಿಸಿದ್ದಾರೆ.
ಫೆಬ್ರವರಿ 10, 2017 ರಂದು ಇಮಾನ್  ತಮ್ಮ ತೂಕ ಇಳಿಸಿಕೊಳ್ಳಲು ಈಜಿಪ್ಟ್ ನಿಂದ ಮುಂಬಯಿಗೆ ಆಗಮಿಸಿದ್ದರು. ಮಾರ್ಚ್‌ 7ರಂದು ಆಸ್ಪತ್ರೆಯ ತಜ್ಞರ ತಂಡ ಒಂದೂವರೆ ಗಂಟೆಗಳ ಶಸ್ತ್ರ ಚಿಕಿತ್ಸೆಯ ಮೂಲಕ ಅವರ ಹೊಟ್ಟೆಯ ಗಾತ್ರವನ್ನು ಶೇ 75 ರಷ್ಷು ಕಡಿಮೆ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News