ಇರಾನ್: ಅಧ್ಯಕ್ಷ ಹುದ್ದೆಗೆ ಅಹ್ಮದಿ ನಜಾದ್ ನಾಮಪತ್ರ
Update: 2017-04-12 19:04 IST
ಟೆಹರಾನ್ (ಇರಾನ್), ಎ. 12: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇರಾನ್‌ನ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಮೇ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ, ಚುನಾವಣೆಯಿಂದ ದೂರವಿರಿ ಎಂಬ ಸರ್ವೋಚ್ಛ ನಾಯಕರ ಸೂಚನೆಯನ್ನು ಅವರು ಧಿಕ್ಕರಿಸಿದಂತಾಗಿದೆ.
ಅಹ್ಮದಿನೆಜಾದ್‌ರ ನಿರ್ಧಾರವು ಚುನಾವಣೆಯಲ್ಲಿ ಸೌಮ್ಯವಾದಿ ಅಧ್ಯಕ್ಷ ಹಸನ್ ರೂಹಾನಿ ವಿಜಯ ಗಳಿಸುತ್ತಾರೆ ಎಂಬ ಹೆಚ್ಚಿನವರ ಅಭಿಪ್ರಾಯವನ್ನು ಬುಡಮೇಲು ಮಾಡಲಿದೆ.
ಈ ಹಿಂದೆ, 2005ರಿಂದ 2013ರವರೆಗೆ ನಾಲ್ಕು ವರ್ಷಗಳ ಎರಡು ಅವಧಿಗೆ ಅಹ್ಮದಿನೆಜಾದ್ ಅಧ್ಯಕ್ಷರಾಗಿದ್ದರು.