ಲಿಬಿಯದಲ್ಲಿ ವಲಸಿಗರ ಮಾರಾಟ : ವಿಶ್ವಸಂಸ್ಥೆ

Update: 2017-04-12 14:58 GMT

ಜಿನೇವ, ಎ. 12: ಲಿಬಿಯದ ಮೂಲಕ ಹಾದು ಹೋಗುವ ಆಫ್ರಿಕನ್ ವಲಸಿಗರನ್ನು ಅಲ್ಲಿನ ಗುಲಾಮರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಹಾಗೂ ಹೀಗೆ ಮಾರಾಟಗೊಂಡವರನ್ನು ಒತ್ತೆಯಾಳುಗಳಾಗಿ, ಜೀತದಾಳುಗಳಾಗಿ ಮತ್ತು ಲೈಂಗಿಕ ದಾಸಿಯರಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ಮಂಗಳವಾರ ಹೇಳಿದೆ.

ದಕ್ಷಿಣದ ನಗರ ಸಭಾದಲ್ಲಿನ ಗ್ಯಾರೇಜ್‌ಗಳು ಮತ್ತು ಕಾರು ಪಾರ್ಕ್‌ಗಳಲ್ಲಿ ಅವರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪಶ್ಚಿಮ ಆಫ್ರಿಕನ್ ವಲಸಿಗರು ಅಂತಾರಾಷ್ಟ್ರೀಯ ವಲಸಿಗರ ಸಂಘಕ್ಕೆ ತಿಳಿಸಿದ್ದಾರೆ.

ವಲಸಿಗರನ್ನು 200 ಡಾಲರ್ (ಸುಮಾರು 13,000 ರೂಪಾಯಿ)ನಿಂದ 500 ಡಾಲರ್ (32,330 ರೂಪಾಯಿ)ವರೆಗಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News