10ನೆ ತರಗತಿವರೆಗೆ ಕನ್ನಡ ಕಡ್ಡಾಯಕ್ಕೆ ಕಸಾಪ ಆಗ್ರಹ

Update: 2017-04-12 18:31 GMT

ಮಂಗಳೂರು, ಎ.12: ನೆರೆರಾಜ್ಯವಾದ ಕೇರಳದ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲೆಯಾಳ ಭಾಷೆಯನ್ನು ಕಡ್ಡಾಯಗೊಳಿಸಬೇಕೆಂದು ಅಲ್ಲಿನ ಸರಕಾರ ಸುಗ್ರಿ ವಾಜ್ಞೆ ಹೊರಡಿಸಿದೆ. ಇದು ಭಾಷೆಯ ಉಳಿವಿನ ದೃಷ್ಟಿಯಿಂದ ಸ್ವಾಗತಾರ್ಹ ಕ್ರಮವಾಗಿದೆ ಎಂದು ಕಸಾಪ ಹೇಳಿಕೆ ನೀಡಿದೆ.

ಕೇರಳ ರಾಜ್ಯದ ಮಾದರಿಯಲ್ಲಿಯೇ ನಮ್ಮ ಕರ್ನಾಟಕ ರಾಜ್ಯದಲ್ಲೂ ಕನ್ನಡವನ್ನು 10ನೇ ತರಗತಿಯವರೆಗೆ ಎಲ್ಲ ಸರಕಾರಿ, ಅನುದಾನಿತ, ಆರ್ಥಿಕ ಸ್ವಾವಲಂಬಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಗೊಳಿಸಬೇಕು. ಇದೇ ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಪದ್ಧತಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಕಸಾಪ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News