ಇಂಡೋನೇಶ್ಯ: ದೋಣಿ ಮುಳುಗಿ 11 ಸಾವು
Update: 2017-04-13 21:24 IST
ಜಕಾರ್ತ, ಎ. 13: ಇಂಡೋನೇಶ್ಯದ ಪ್ರಮುಖ ದ್ವೀಪ ಜಾವಾದಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ದೋಣಿ ದುರಂತಗಳಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಮೊದಲ ಘಟನೆಯಲ್ಲಿ, ಮಜಲೆಂಕ ಜಿಲ್ಲೆಯಲ್ಲಿ ಬೆಳೆ ಕಟಾವಿಗೆ ರೈತರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ನದಿಯೊಂದರಲ್ಲಿ ಮಗುಚಿ ಒಂಬತ್ತು ಮಂದಿ ಮೃತರಾದರು.
ಎರಡನೆ ಘಟನೆಯಲ್ಲಿ, ಸಿಡೊಅರ್ಜೊ ಜಿಲ್ಲೆಯ ಸಮುದ್ರದಲ್ಲಿ ಪ್ರಯಾಣಿಕ ದೋಣಿಯೊಂದು ಮಗುಚಿ ಇಬ್ಬರು ಮೃತಪಟ್ಟರು ಹಾಗೂ ಐವರು ನಾಪತ್ತೆಯಾಗಿದ್ದಾರೆ.