ದುರುಪಯೋಗಗೊಳ್ಳದಿರಲಿ

Update: 2017-04-13 18:43 GMT

ಮಾನ್ಯರೆ,

ಗ್ರಾಮೀಣ ಪ್ರದೇಶದ ಕೆಲಸವಿಲ್ಲದ ಬಡ ಜನರಿಗೆ ವರ್ಷಕ್ಕೆ ಕನಿಷ್ಠ ನೂರು ದಿನಗಳಾದರೂ ಕೆಲಸ ನೀಡುವ ಮೂಲಕ ಬಡವರಿಗೆ ಜೀವನೋಪಾಯ ಕಲ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ. ಆದರೆ ಈ ಯೋಜನೆಯಡಿಯಲ್ಲಿ ಮೂರು ಕೋಟಿಗಿಂತ ಅಧಿಕ ನಕಲಿ ಮತ್ತು ಅಸ್ತಿತ್ವದಲ್ಲಿ ಇಲ್ಲದ ಕಾರ್ಡುಗಳು ಹೊಂದಿರುವ ಫಲಾನುವಿಗಳನ್ನು ಇತ್ತೀಚೆಗೆ ಕೇಂದ್ರ ಸರಕಾರ ರದ್ದುಗೊಳಿಸಿದ್ದು, ಜನಪರ ಯೋಜನೆಯೊಂದರ ದುರುಪಯೋಗಕ್ಕೆ ನಿದರ್ಶನವಾಗಿದೆ.

ಸರಕಾರಗಳು ಬಡಜನರ ಕಲ್ಯಾಣಕ್ಕಾಗಿ ತಂದಿರುವ ಹಲವು ಯೋಜನೆಗಳು ಪರಿಣಾಮಕಾರಿ ಆಗಬೇಕಾದರೆ ಪ್ರಜ್ಞಾವಂತ ನಾಗರಿಕ ಸಮಾಜ ಸರಕಾರದ ಜೊತೆಗೆ ಕೈಜೋಡಿಸಿ ಅರ್ಹರಿಗೆ ಯೋಜನೆಗಳ ಉಪಯೋಗ ಪಡೆಯಲು ಸಹಕರಿಸಬೇಕು.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News