ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾ ಪಡೆಯ ಬಾಂಬ್ ದಾಳಿಗೆ ಕಾಸರಗೋಡಿನ ಯುವಕ ಬಲಿ ?
Update: 2017-04-14 12:43 IST
ತಿರುವನಂತಪುರ,ಎ.14: ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾ ಪಡೆಯು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗುದಾಣದ ಮೇಲೆ ನಡೆಸಿದ್ದ ಬಾಂಬ್ ದಾಳಿ ವೇಳೆ ಐಸಿಸ್ ಸೇರಿದ್ದಾನೆಂದು ಶಂಕಿಸಲಾದ ಕೇರಳ ಮೂಲದ ಯುವಕನೋರ್ವ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರಾಂತದ ಮೇಲೆ ಅಮೆರಿಕದ ಸೇನಾ ಪಡೆಗಳ ವೈಮಾನಿಕ ಜಿಬಿಯು -43 ಬಾಂಬ್ ದಾಳಿಯಲ್ಲಿ ಒಟ್ಟು 36 ಉಗ್ರರು ಹತರಾಗಿದ್ದು, ಕಾಸರಗೂಡಿನ 23ರ ಹರೆಯದ ಯುವಕ ಯುವಕನೊಬ್ಬಸೇರಿದ್ದಾನೆ ಎಂದು ಹೇಳಲಾಗಿದೆ, ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭಿಸಿಲ್ಲ.
ಈತ ಮೃತಪಟ್ಟಿರುವ ಬಗ್ಗೆ ಕಾಸರಗೋಡಿನಲ್ಲಿರುವ ಆತನ ತಂದೆಗೆ ಸಂದೇಶ ಬಂದಿದೆ ಎಂದು ’ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಈತನ ಜೊತೆ ಉಗ್ರ ಸಂಘಟನೆಯನ್ನು ಸೇರಿದ್ದ ಮತ್ತೊಬ್ಬ ಯುವಕನು ಈ ಬಗ್ಗೆ ಸಂದೇಶ ಕಳುಹಿಸಿರುವುದಾಗಿ ವರದಿ ತಿಳಿಸಿದೆ.