×
Ad

ಇರಾನ್ ಅಧ್ಯಕ್ಷ ರೂಹಾನಿ 2ನೆ ಬಾರಿಗೆ ಸ್ಪರ್ಧೆ

Update: 2017-04-15 21:44 IST

ಟೆಹರಾನ್ (ಇರಾನ್), ಎ. 15: ಇರಾನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೆ ಬಾರಿಗೆ ಸ್ಪರ್ಧಿಸಲು ದೇಶದ ಅಧ್ಯಕ್ಷ ಹಸನ್ ರೂಹಾನಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಉತ್ತಮ ವ್ಯಾವಹಾರಿಕ ಜ್ಞಾನ ಹೊಂದಿರುವ ರೂಹಾನಿ, 2015ರಲ್ಲಿ ಪ್ರಬಲ ರಾಷ್ಟ್ರಗಳೊಂದಿಗೆ ಏರ್ಪಟ್ಟ ಮಹತ್ವದ ಪರಮಾಣು ಒಪ್ಪಂದದ ರೂವಾರಿಯಾಗಿದ್ದರು.

 ‘‘ಇರಾನ್, ಇಸ್ಲಾಮ್, ಸ್ವಾತಂತ್ರಕ್ಕಾಗಿ ಮತ್ತು ದೇಶದಲ್ಲಿ ಹೆಚ್ಚಿನ ಸ್ಥಿರತೆ ತರುವುದಕ್ಕಾಗಿ ಸೇವೆ ಸಲ್ಲಿಸಲು ನಾನು ಮತ್ತೊಮ್ಮೆ ಸಿದ್ಧನಾಗಿದ್ದೇನೆ. ಇರಾನ್ ಮತ್ತು ಇಸ್ಲಾಮ್‌ಗಾಗಿ ಮತ ಹಾಕುವಂತೆ ಎಲ್ಲ ಇರಾನಿಯರನ್ನು ನಾನು ಒತ್ತಾಯಿಸುತ್ತೇನೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರೂಹಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News