ಬರ್ಕ್‌ಲೇಯಲ್ಲಿ ಮಹಿಳೆಯರ ನೇತೃತ್ವದ ಮಸೀದಿ
Update: 2017-04-15 22:39 IST
ಬರ್ಕ್‌ಲೇ (ಕ್ಯಾಲಿಫೋರ್ನಿಯ), ಎ. 15: ಅಮೆರಿಕದಲ್ಲಿ ಮಹಿಳೆಯರ ಆಡಳಿತದ ಎರಡನೆ ಮಸೀದಿ ಕ್ಯಾಲಿಫೋರ್ನಿಯದಲ್ಲಿ ಶುಕ್ರವಾರ ಆರಂಭಗೊಂಡಿತು. ಆದರೆ, ಎರಡು ವರ್ಷಗಳ ಹಿಂದೆ ಲಾಸ್ ಏಂಜಲಿಸ್‌ನಲ್ಲಿ ಆರಂಭಗೊಂಡ ಮಹಿಳಾ ಮಸೀದಿಯಂತಲ್ಲದೆ, ಬರ್ಕ್‌ಲೇಯಲ್ಲಿ ಉದ್ಘಾಟನೆಗೊಂಡಿರುವ ಮಸೀದಿಗೆ ಪ್ರವೇಶ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಮುಕ್ತವಾಗಿದೆ.
‘‘ಕಾಲ್ಬು ಮರ್ಯಮ್ ಮಹಿಳಾ ಮಸೀದಿಯು ಮಹಿಳೆಯರು ಕತ್ತಲೆಯಲ್ಲಿ ಅಡಗಿಕೊಳ್ಳದೆ ದೇವಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲು ಇರುವ ಸ್ಥಳವಾಗಿದೆ’’ ಎಂದು ಮಸೀದಿಯ ಸ್ಥಾಪಕಿ ರಬಿಅ ಕೀಬಲ್ ಹೇಳುತ್ತಾರೆ.