×
Ad

ಅಫ್ಘಾನ್‌ನಲ್ಲಿ ದೈತ್ಯ ಬಾಂಬ್ ದಾಳಿ : ಮೃತ ಉಗ್ರರ ಸಂಖ್ಯೆ 90ಕ್ಕೆ

Update: 2017-04-15 22:43 IST

ಕಾಬೂಲ್, ಎ. 15: ಅಫ್ಘಾನಿಸ್ತಾನದಲ್ಲಿನ ಐಸಿಸ್ ಉಗ್ರರ ಅಡಗುದಾಣವೊಂದರ ಮೇಲೆ ಅಮೆರಿಕ ನಡೆಸಿದ ಬೃಹತ್ ಬಾಂಬ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 90ಕ್ಕೇರಿದೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದ ಪಡೆಗಳು ಈ ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಛಗೊಳಿಸಿವೆ.

‘ಎಲ್ಲಾ ಬಾಂಬ್‌ಗಳ ತಾಯಿ’ ಎಂಬುದಾಗಿ ಅಡ್ಡ ಹೆಸರಿನಿಂದ ಕರೆಯುವ ಜಿಬಿಯು-43/ಬಿ ಎಂಬ ‘ಮಾಸಿವ್ ಆರ್ಡಿನೆನ್ಸ್ ಏರ್ ಬ್ಲಾಸ್ಟ್ ಬಾಂಬ್’ನ್ನು ಗುರುವಾರ ಮೊದಲ ಬಾರಿಗೆ ನಂಗರ್‌ಹಾರ್ ಪ್ರಾಂತದ ಪೂರ್ವ ಭಾಗದಲ್ಲಿರುವ ಐಸಿಸ್ ನೆಲೆಗಳ ಮೇಲೆ ಪ್ರಯೋಗಿಸಲಾಗಿತ್ತು.

ಈ ಬಾಂಬ್ ಅಫ್ಘಾನಿಸ್ತಾನದಲ್ಲಿ ಆಘಾತವನ್ನು ಸೃಷ್ಟಿಸಿದೆ. ಅಫ್ಘಾನಿಸ್ತಾನವನ್ನು ಶಸ್ತ್ರಗಳ ಬಳಕೆಯ ಪ್ರಯೋಗಶಾಲೆಯನ್ನಾಗಿ ಬಳಸುವುದನ್ನು ಹಲವರು ಖಂಡಿಸಿದ್ದಾರೆ. ತಾಲಿಬಾನ್‌ನಷ್ಟು ದೊಡ್ಡ ಬೆದರಿಕೆಯಾಗಿರದ ಭಯೋತ್ಪಾದಕ ಗುಂಪೊಂದರ ಮೇಲೆ ಇಂಥ ಬಾಂಬ್‌ಗಳನ್ನು ಪ್ರಯೋಗಿಸುವುದನ್ನು ಅವರು ವಿರೋಧಿಸಿದ್ದಾರೆ.

‘‘ಈವರೆಗೆ ಕನಿಷ್ಠ 92 ಐಸಿಸ್ ಭಯೋತ್ಪಾದಕರು ಈ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ’’ ಎಂದು ಅಚಿನ್ ಜಿಲ್ಲೆಯ ಗವರ್ನರ್ ಇಸ್ಮಾಯೀಲ್ ಶಿನ್ವಾರಿ ರವಿವಾರ ಎಎಫ್‌ಪಿ ಸುದ್ದಿ ಸಂಸ್ಥೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News