×
Ad

ಮುಂಬೈ ವಿಮಾನ ನಿಲ್ದಾಣಕ್ಕೆ ಉಗ್ರರ ಬೆದರಿಕೆ ; ಹೈ ಅಲರ್ಟ್‌ ಘೋಷಣೆ

Update: 2017-04-16 12:32 IST

ಹೊಸದಿಲ್ಲಿ, ಎ.16: ಮುಂಬೈ ವಿಮಾನ ನಿಲ್ದಾಣಕ್ಕೆ ಉಗ್ರರ ಬೆದರಿಕೆಯ ಸಂದೇಶ ಬಂದಿರುವ  ಹಿನ್ನೆಲೆಯಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್‌ನ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗದ್ದು, ಬಿಗಿ ಭಧ್ರತೆ ಒದಗಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ  ಒಳಪಡಿಸಲಾಗುತ್ತಿದೆ.
ಮೂರು ಉಗ್ರರ ತಂಡದಲ್ಲಿ 23 ಮಂದಿ ಇದ್ದಾರೆ. ಇವರೆಲ್ಲ ಮೂರು ತಂಡಗಳಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್‌ನ ವಿಮಾನ ವಿಮಾನ ನಿಲ್ದಾಣಗಳಿಗೆ  ದಾಳಿ ನಡೆಸಿ ವಿಮಾನಗಳನ್ನು ಅಪಹರಿಸುವ ತಂತ್ರವನ್ನು ನಡೆಸಿದ್ದಾರೆ ಎಂಬ ಇಮೇಲ್‌ ಸಂದೇಶ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದೆ.
ಮೂರು ವಿಮಾಣ ನಿಲ್ದಾಣಗಳಲ್ಲಿ ಹೊರಡುವ ವಿಮಾನಗಳನ್ನು ಅಪಹರಿಸುವ ಬಗ್ಗೆ ಉಗ್ರರು ಸಂಚು ರೂಪಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News